ನವದೆಹಲಿ: ಮಂಗಳವಾರ ಕೇಂದ್ರ ರೇಲ್ವೇ ಸಚಿವ ಡಿ.ವಿ.ಸದಾನಂದಗೌಡ ಅವರು ಮಂಡಿಸಿದ ರೇಲ್ವೇ ಬಜೆಟ್ ಕುರಿತಂತೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದು, ವಿವಿಧ ನಾಯಕರ ಅಭಿಪ್ರಾಯ ಇಲ್ಲಿವೆ.
--
21ನೇ ಶತಮಾನದ ಬಜೆಟ್
21ನೇ ಶತಮಾನದ ಬಜೆಟ್. ಸುರಕ್ಷತೆ, ಸ್ವಚ್ಛತೆಗೆ ಆಧ್ಯತೆ ನೀಡಲಾಗಿದ್ದು, ಸಂಪೂರ್ಣ ಪಾರದರ್ಶಕ ಮತ್ತು ಸಮಗ್ರ ಬಜೆಟ್ ಮಂಡಿಸಲಾಗಿದೆ.
-ನರೇಂದ್ರ ಮೋದಿ
ಪ್ರಧಾನ ಮಂತ್ರಿ
--
ದೂರದೃಷ್ಟಿ ಇಲ್ಲ
ಡಿ.ವಿ.ಸದಾನಂದಗೌಡ ಅವರು ಮಂಡಿಸಿರುವ ಬಜೆಟ್ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ. ಅವರು ಘೋಷಣೆ ಮಾಡಿರುವ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಅಸಾಧ್ಯ
-ರಾಹುಲ್ಗಾಂಧಿ
ಎಐಸಿಸಿ ಉಪಾಧ್ಯಕ್ಷ
--
ಅನುದಾನ ಘೋಷಣೆಯಲ್ಲಿ ತಾರತಮ್ಯ
ಸದಾನಂದಗೌಡ ಅವರು ಮಂಡಿಸಿರುವ 2014-15ರ ಸಾಲಿನ ಬಜೆಟ್ನಲ್ಲಿ ತಾರತಮ್ಯವಾಗಿದ್ದು, ಭಾರತದ ಬಹುತೇಕ ಭಾಗಳಿಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ.
-ಶರದ್ಯಾದವ್,
ಜೆಡಿಯು ಮುಖಂಡ
--
ಭವಿಷ್ಯದ ಆಧಾರಿತ ಬಜೆಟ್
ಮುಂಬರುವ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸದಾನಂದಗೌಡ ಅವರು ರೇಲ್ವೇ ಬಜೆಟ್ ರೂಪಿಸಿದ್ದು, ಇದೊಂದು ಭವಿಷ್ಯದ ದೃಷ್ಟಿಕೋನದ ಬಜೆಟ್ ಆಗಿದೆ.
-ಧರ್ಮೇಂದ್ರ ಪ್ರಧಾನ್
ಕೇಂದ್ರ ಸಚಿವ
--
ತಂತ್ರಜ್ಞಾನದ ಸದ್ಭಳಕೆಗೆ ಒತ್ತು ನೀಡಿದ ಮೊದಲ ಬಜೆಟ್
ಕೇಂದ್ರ ರೇಲ್ವೇ ಸಚಿವರು ತಂತ್ರಜ್ಞಾನವನ್ನು ಸದ್ಭಳಕೆ ಮಾಡುವ ಸದುದ್ದೇಶದಿಂದ ಬಜೆಟ್ ಮಂಡಿಸಿದ್ದು, ತಂತ್ರಜ್ಞಾನದ ಸದ್ಭಳಕೆಗೆ ಒತ್ತು ನೀಡಿದ ಮೊದಲ ಬಜೆಟ್ ಆಗಿದೆ.
-ಅರುಣೇಂದ್ರ ಕುಮಾರ್
ರೇಲ್ವೇ ಬೋರ್ಡ್ ಅಧ್ಯಕ್ಷ
--
ನಷ್ಟದಲ್ಲಿರುವ ಇಲಾಖೆಯಿಂದ ಆಧುನೀಕರಣ ಹೇಗೆ ಸಾಧ್ಯ..?
ಸದಾನಂದಗೌಡ ಅವರು ಇಲಾಖೆಯ ವಾಸ್ತವಿಕತೆಯನ್ನು ಮರೆತು ಬಜೆಟ್ ಮಂಡಿಸಿದ್ದಾರೆ. ರೇಲ್ವೆ ಇಲಾಖೆ ನಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಇಲಾಖೆಯ ಆಧುನೀಕರಣ ಹೇಗೆ ಸಾಧ್ಯ. ಬುಲೆಟ್ ರೈಲು ಬಗ್ಗೆ ಇಲಾಖೆಯ ಸಮೀಕ್ಷೆ ಸಮಂಜಸವಾಗಿದೆಯೇ...?
-ಮಾಯಾವತಿ
ಬಿಎಸ್ಪಿ ನಾಯಕಿ
--
ಆದ್ಯತೆ ಮೇರೆಗೆ ಯೋಜನೆ ಪೂರ್ಣ
ಸದಾನಂದಗೌಡ ಅವರು ಉತ್ತಮ ಬಜೆಟ್ ಮಂಡಿಸಿದ್ದು, ಕೆಲವರಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಬಜೆಟ್ನಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಆದ್ಯತೆಯ ಮೇರೆದೆ ಪೂರ್ಣಗೊಳಿಸಲಾಗುವುದು.
-ವೆಂಕಯ್ಯನಾಯ್ಡು
ಕೇಂದ್ರ ಸಚಿವ
--
ನನಗೇನೂ ತಿಳಿಯಲೇ ಇಲ್ಲ
ಸದಾನಂದಗೌಡ ಅವರು ತಾವು ಬರೆದುಕೊಂಡಿದ್ದನ್ನು ಸದನದಲ್ಲಿ ಆತುರಾತುರವಾಗಿ ಓದಿದ್ದಾರೆ ಅಷ್ಟೇ. ಅವರು ಏನು ಹೇಳಿದರು ಎಂಬುದು ನನಗೆ ತಿಳಿಯಲೇ ಇಲ್ಲ.
-ಲಾಲು ಪ್ರಸಾದ್ ಯಾದವ್
ಮಾಜಿ ರೈಲ್ವೇ ಸಚಿವ ಮತ್ತು ಆರ್ಜೆಡಿ ಮುಖ್ಯಸ್ಥ
--
ಇಲಾಖೆಯ ಖಾಸಗೀಕರಣದ ಪತ್ರ
ಸದಾನಂದಗೌಡ ಅವರು ಕಲಾಪದಲ್ಲಿ ಮಂಡಿಸಿದ್ದು ರೇಲ್ವೇ ಬಜೆಟ್ ಅಲ್ಲ. ಅದು ಇಲಾಖೆಯ ಖಾಸಗೀಕರಣದ ಪತ್ರ.
-ಮನೀಶ್ ತಿವಾರಿ
ಕಾಂಗ್ರೆಸ್ ಮುಖಂಡ
--
ನಿರಾಶಾದಾಯಕ ಬಜೆಟ್
ಸದಾನಂದಗೌಡ ಅವರು ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದ್ದು, ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಇಲಾಖೆಯನ್ನು ಖಾಸಗೀಕರಣ ಮಾಡುವತ್ತ ಅವರು ಚಿತ್ತಹರಿಸಿದ್ದಾರೆ.
-ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ಮುಖ್ಯಮಂತ್ರಿ
--
ಇದು ಅಹಮದಾಬಾದ್ ಬಜೆಟ್
ಸದಾನಂದಗೌಡ ಅವರು ಮಂಡಿಸಿರುವ ಬಜೆಟ್ ಅಹಮದಾಬಾದ್ಗೆ ಮಾತ್ರ ಸೀಮಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ತವರು ಜಿಲ್ಲೆಗೆ ಆಧ್ಯತೆ ನೀಡಿ ಬಜೆಟ್ ತಯಾರಿಸಿದ್ದಾರೆ.
-ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಮುಖಂಡ
--
ಉತ್ತಮ ಪ್ರಯತ್ನ
ಸದಾನಂದಗೌಡ ಅವರು ತಮ್ಮ ಪ್ರಥಮ ರೇಲ್ವೇ ಬಜೆಟ್ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಹಳೆಯ ಯೋಜನೆಗಳನ್ನೇ ಪೂರ್ಣಗೊಳಿಸಲು ಆಧ್ಯತೆ ನೀಡಿದ್ದಾರೆ. ಹೀಗಾಗಿ ಇದೊಂದು ಉತ್ತಮ ಪ್ರಯತ್ನ.
-ಪ್ರಹ್ಲಾದ್ ಜೋಷಿ
ಬಿಜೆಪಿ ಮುಖಂಡ