ಸದಾನಂದಗೌಡರಿಂದ ರೇಲ್ವೆ ಬಜೆಟ್ ಮಂಡನೆ
ರಧಾನಿ ನರೇಂದ್ರ ಮೋದಿ ಸರ್ಕಾರದ ಚೊಚ್ಚಲ ರೇಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಲೋಕಸಭೆಯಲ್ಲಿ ಕೇಂದ್ರ ರೇಲ್ವೆ ಸಚಿವ ಸದಾನಂದಗೌಡರಿಂದ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಚೊಚ್ಚಲ ರೇಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಲೋಕಸಭೆಯಲ್ಲಿ ಕೇಂದ್ರ ರೇಲ್ವೆ ಸಚಿವ ಸದಾನಂದಗೌಡ ಅವರು ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟ್ ಮಂಡನೆಗೂ ಮುನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸೂಕ್ರ ಕ್ರಮಕೈಗೊಳ್ಳಲಾಗುವುದು ಹೀಗಾಗಿ ರೇಲ್ವೆ ಭದ್ರತೆಗೆ ಪ್ರಧಮ ಆದ್ಯತೆ ಎಂದರು.
ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಉದ್ದೇಶ ನಮ್ಮದಾಗಿದ್ದು, ತಕ್ತಕ್ಷಣ ಪ್ರಯಾಣಿಕರಿಗೆ ಇದರ ಅನುಕೂಲ ಸಿಗುವುದಿಲ್ಲ ಕ್ರಮೇಣ ಈ ಎಲ್ಲಾ ಸೌಲಭ್ಯಗಳು ಸಿಗಲಿದೆ ಎಂದು ಸದಾನಂದಗೌಡ ಹೇಳಿದ್ದಾರೆ.
ಅಭಿವೃದ್ಧಿ ಯೋಜನೆಗಳ ಭರಪೂರ ಘೋಷಣೆಗಳ ನಿರೀಕ್ಷೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಗುರಿ ಮುಟ್ಟಲು ಹೆಚ್ಚುವರಿ ಆದಾಯ ಸಂಗ್ರಹಕ್ಕೆ ಹೊಸ ವಿಧಾನಗಳನ್ನು ಅನುಸರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಅನುಪಯುಕ್ತ ಯೋಜನೆಗಳನ್ನು ಕೈಬಿಟ್ಟು ಬಜೆಟ್ ಹೊರೆ ಇಳಿಸಿಕೊಳ್ಳಲಿದೆ. ಆದ್ಯತೆ ಮೇರೆಗೆ ಹೊಸ ಯೋಜನೆಗಳನ್ನು ಸದಾನಂದ ಗೌಡ ಪ್ರಕಟಿಸಲಿದ್ದಾರೆ.
ಬುಲೆಟ್ ರೈಲು ಘೋಷಣೆಯಾಗುವ ಸಾಧ್ಯತೆ ಇದ್ದು, ರೇಲ್ವೇಯಲ್ಲಿ ಎಫ್ಡಿಐ ಹೂಡಿಕೆ ಬಗ್ಗೆ ಪ್ರಸ್ತಾಪವಾಗುವ ನಿರೀಕ್ಷೆ ಇದೆ. ಮಂಗಳೂರು ವಿಭಾಗವನ್ನು ಸ್ವತಂತ್ರ ವಿಭಾಗವಾಗಿ ಘೋಷಿಸುವ ಸಾಧ್ಯತೆ ಇದೆ.
ವಿಶ್ವದರ್ಜೆಯ ರೈಲು ನಿಲ್ದಾಣ ಸ್ಥಾಪನೆ, ಸ್ವಚ್ಛತೆ, ಸ್ವಯಂ ಚಾಲಿತ ಬಾಗಿಲುಗಳ ನಿರ್ಮಾಣದ ಬಗ್ಗೆ ಯೋಜನೆ ಇರುವ ಸಾಧ್ಯತೆ ಇದೆ. ಮೂಲ ಸೌಕರ್ಯ ಅಭಿವೃದ್ಧಿ ಕಡೆ ಕೂಡ ಹೊಸ ಬಜೆಟ್ ಗಮನ ನೀಡಿರಬಹುದು ಎಂದು ಊಹಿಸಲಾಗಿದೆ.