ಪೇಸ್ಬುಕ್ಗೆ ಸಚಿವರ ಈಜುಡುಗೆ ಫೋಟೋ ಆಪ್ಲೋಡ್: ವ್ಯಕ್ತಿ ವಿರುದ್ಧ ಎಫ್ಐಆರ್
ಗೋವಾದ ಲೋಕೋಪಯೋಗಿ...
ಪಣಜಿ: ಗೋವಾದ ಲೋಕೋಪಯೋಗಿ ಸಚಿವ ಸುದೀನ್ ಧವಾಲಿಕರ್ ಅವರು ಈಜುಡುಗೆ ಧರಿಸಿರುವಂತ ಫೋಟೊಗಳನ್ನು ಪೇಸ್ಬುಕ್ಗೆ ಅಪ್ಲೋಡ್ ಮಾಡಿದ ಆರೋಪದ ಮೇಲೆ ಅಮೆರಿಕಾದಲ್ಲಿ ವಾಸವಾಗಿರುವ ವ್ಯಕ್ತಿಯೊರ್ವನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಚಿವರ ಘನತೆಗೆ ಧಕ್ಕೆ ತರುವಂತ ಫೋಟೋಗಳನ್ನು ಸಾವಿಯೋ ಅಲ್ಮೇಡಿಯಾ ಎಂಬಾತ ಕಳೆದ ವಾರ ಪೇಸ್ಬುಕ್ಗೆ ಅಪ್ಲೋಡ್ ಮಾಡಿದ್ದ. ಪೇಸ್ಬುಕ್ನಲ್ಲಿ ಹಾಕಿರುವ ಫೋಟೋಗಳು ಜನರನ್ನು ಕೆರಳಿಸುವಂತಿದ್ದು, ಈ ಆರೋಪದಡಿ ಪಣಜಿ ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ಪ್ರಕರಣದ ತನಿಖೆಯನ್ನು ಸೈಬರ್ ಸೇಲ್ಗೆ ವರ್ಗಾಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಿ.ಎಲ್. ಪಾಟೀಲ್ ಹೇಳಿದ್ದಾರೆ.
ಈ ಹಿಂದೆ ಸುದೀನ್ ಧವಾಲಿಕರ್ ಅವರು, ಗೋವಾ ಬೀಚ್ಗಳಲ್ಲಿ ಬಿಕಿನಿ ಧರಿಸುವುದನ್ನು ನಿರ್ಭಂದಿಸಬೇಕು. ಅಲ್ಲದೆ ಯುವತಿಯರು ತುಂಡುಡುಗೆಗಳನ್ನು ತೊಟ್ಟು ನೈಟ್ಕ್ಲಬ್ಗಳಿಗೆ ತರಳುವುದು ಗೋವಾ ಸಂಸ್ಕೃತಿಗೆ ವಿರುದ್ಧವಾಗಿದೆ. ಹೀಗಾಗಿ ಇಂತದಕ್ಕೆಲ್ಲ ಅವಕಾಶ ನೀಡಬಾರದು ಎಂದು ಹೇಳಿ ವಿವಾದಕ್ಕೀಡಾಗಿದ್ದರು.
ಸುದೀನ್ ಧವಾಲಿಕರ್ ಅವರ ಹೇಳಿಕೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್ ಧವಾಲಿಕರ್ ಅವರಿಗೆ ಪಿಂಕ್ ಬಣ್ಣದ ತುಂಡುಡುಗೆಯನ್ನು ಉಡುಗೊರೆಯಾಗಿ ನೀಡಿತ್ತು.