ಕೇಂದ್ರ ಬಜೆಟ್: ಕೃಷಿ ವಲಯಕ್ಕೆ ಬಂಪರ್ ಕೊಡುಗೆ
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಂದು ಮಂಡಿಸಿದ 2014-15ನೇ ಸಾಲಿನ
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಂದು ಮಂಡಿಸಿದ 2014-15ನೇ ಸಾಲಿನ ಬಜೆಟ್ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತ ಪರವಾದ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಉದಾರತೆ ತೋರಿರುವ ಅರುಣ್ ಜೇಟ್ಲಿ, ರೈತರ ಬಡ್ಡಿ ಭಾರವನ್ನು ಮತ್ತಷ್ಟು ತಗ್ಗಿಸಿದ್ದಾರೆ. ರೈತರಿಗೆ ಶೇ.7ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಸಕಾಲಕ್ಕೆ ಸಾಲ ಮರು ಪಾವತಿ ಮಾಡುವ ರೈತರಿಗೆ ಶೇ.3ರಷ್ಟು ವಿನಾಯ್ತಿ ನೀಡಿದ್ದಾರೆ.
ಕೃಷಿ ವಲಯಕ್ಕೆ ಸಿಕ್ಕಿದ್ದು...
- ಕೃಷಿ ಸಾಲಕ್ಕಾಗಿ 8 ಲಕ್ಷ ಕೋಟಿ ಮೀಸಲು
- ರೈತರಿಗೆ ಶೇ.7ರ ಬಡ್ಡಿದರದಲ್ಲಿ ಸಾಲ ಸೌಲಭ್ಯ
- ರಾಜಸ್ಥಾನ, ಹರಿಯಾಣ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಹೊಸ ಕೃಷಿ ವಿವಿ ಸ್ಥಾಪನೆ. ಇದಕ್ಕಾಗಿ 200 ಕೋಟಿ ಮೀಸಲು
- ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಗೆ 100 ಕೋಟಿ
- ಕೃಷಿ ವಲಯದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಗೆ ಚಿಂತನೆ
- ಅಸ್ಸಾಂ ಮತ್ತು ಜಾರ್ಖಂಡ್ನಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆ. ತಲಾ 100 ಕೋಟಿ ಮೀಸಲು
- ಕೃಷಿ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ 100 ಕೋಟಿ
- ವೈಜ್ಞಾನಿ ಕೃಷಿ ಗೋದಾಮುಗಳಿಗೆ 5 ಸಾವಿರ ಕೋಟಿ
- ದೇಶಾದ್ಯಂತ ಮಣ್ಣು ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ 100 ಕೋಟಿ
- ಅಲ್ಪಾವಧಿ ಕೃಷಿ ಸಾಲ ನಿಧಿಗೆ 5 ಸಾವಿರ ಕೋಟಿ
- ದೀರ್ಘಾವಧಿ ಕೃಷಿ ಸಾಲ ನಿಧಿಗೂ 5 ಸಾವಿರ ಕೋಟಿ
- ಹವಾಮಾನ ಸಂಶೋಧನಾ ಕೇಂದ್ರಕ್ಕೆ 100 ಕೋಟಿ
- ಬೆಲೆ ಏರಿಕೆ ತಡೆಗಟ್ಟಲು 500 ಕೋಟಿ
- ಜಾನುವಾರು ತಳಿ ಅಭಿವೃದ್ಧಿಗೆ 50 ಕೋಟಿ
- ನಬಾರ್ಡ್ ಮೂಲಕ 5 ಲಕ್ಷ ಭೂ ರಹಿತ ರೈತರಿಗೆ ನೆರವು
- 100 ಕೋಟಿ ವೆಚ್ಚದಲ್ಲಿ ರೈತರಿಗೆ ಸಾಯಿಲ್ ಕಾರ್ಡ್
- ಹೊಸ ಕೃಷಿ ಹಾಗೂ ತೋಟಗಾರಿಕಾ ಕಾಲೇಜು ಸ್ಥಾಪನೆಗೆ 200 ಕೋಟಿ ರು ಅನುದಾನ.
- ರೈತರಿಗಾಗಿ ಪ್ರತ್ಯೇಕ ಕೃಷಿ ಟಿವಿ ಈ ವರ್ಷದಿಂದಲೇ ಆರಂಭ.
- ಕೃಷಿ ಕ್ಷೇತ್ರದಲ್ಲಿ 4% ಪ್ರಗತಿ ನಿರೀಕ್ಷೆ. 100 ಕೋಟಿ ರು ಆಗ್ರಾ ಇನ್ ಫ್ರಾ ಫಂಡ್
- ಮಣ್ಣಿನ ಸವಕಳಿ ತಡೆಗೆ ಹೊಸ ಯೋಜನೆ- 100 ಕೋಟಿ ಮೀಸಲು
- ಕೃಷಿ ಬಳಕೆಗೆ ಯೋಗ್ಯವಲ್ಲದ ಭೂಮಿ ಎಸ್ಇಝೆಡ್ಗಳಿಗೆ
- ಎಲ್ಲಾ ರಾಜ್ಯಗಳಲ್ಲಿ ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ