ಜೇಟ್ಲಿ ಬಜೆಟ್, ಜನಪರ ಬಜೆಟ್: ಅನಂತಕುಮಾರ್
ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ 2014-15ರ ಸಾಲಿನ ಬಜೆಟ್ ಜನಪರ ಬಜೆಟ್ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತಕುಮಾರ್ ಹೇಳಿದ್ದಾರೆ.
ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದೆ ಅನಂತಕುಮಾರ್, ಆರ್ಥಿಕತೆಗೆ ಪುನಶ್ಟೇತನ ನೀಡುವ ಬಜೆಟ್ ಇದಾಗಿದ್ದು, ಜನಪರ ಅಭಿವೃದ್ಧಿಗಾಗಿಯೇ ಮಾಡಿರುವ ಬಜೆಟ್ ಎಂದರು. ಈ ಬಜೆಟ್ನಲ್ಲಿ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕೃಷಿ, ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.
ಪ್ರಸ್ತುತ ಬಜೆಟ್ನಲ್ಲಿ ದೇಶದ ಜನತೆಗೆ ಹೊರೆಯಾಗದಂತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಜೆಟ್ನಲ್ಲಿ ದೇಶದ ಜನರ ಮೇಲೆ ಯಾವುದೇ ತೆರಿಗೆ ವಿಧಿಸಿಲ್ಲ. ಅಲ್ಲದೆ ಎಲ್ಲಾ ವರ್ಗದವರಿಗೂ ಸರಿಸಮವಾದ ಬಜೆಟ್ ಕೊಡುಗೆ ಸಿಕ್ಕಿದೆ ಎಂದರು.
ಬಜೆಟ್ ಮುಖ್ಯಾಂಶಗಳು
- ಹೊಸ ಯೂರಿಯಾ ನೀತಿ ಜಾರಿ, ಗೊಬ್ಬರ ಬೆಲೆ ಹೆಚ್ಚಳ ಸಾಧ್ಯತೆ
- ದೇಶದ 9 ವಿಮಾನ ನಿಲ್ದಾಗಳಲ್ಲಿ ಇ ವೀಸಾ ಸೇವೆ, ಪ್ರವಾಸೋದ್ಯಮಕ್ಕೆ ಇ ವೀಸಾ ಯೋಜನೆ ಜಾರಿ
- ಸಾಂಪ್ರದಾಯಿಕ ಉದ್ಯೋಗ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕೇಂದ್ರ
- ವಿಮಾ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಎಫ್ಡಿಐ ಅವಕಾಶ
- 1961ರ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿ
- ತೈಲ, ಎಲ್ಪಿಜಿ ಸಬ್ಸಿಡಿ ಸುಧಾರಣೆ
- ತೆರಿಗೆ ವಾಜ್ಯಗಳ ವಿಚಾರಣೆ 2 ತಿಂಗಳಲ್ಲಿ ಮುಗಿಸಲು ಕ್ರಮ
- ಗ್ರಾಮ ಜ್ಯೋತಿ ಯೋಜನೆಗೆ 500 ಕೋಟಿ
- ಕಿಸಾನ್ ಉಳಿತಾಯ ಪತ್ರಗಳ ಮೂಲಕ ಉಳಿತಾಯ ಯೋಜನೆ ಜಾರಿ
- ದೊಡ್ಡ ಸಿಟಿಗಳ ಬಳಿ ಸ್ಮಾರ್ಟ್ ಸಿಟಿ ನಿರ್ಮಾಣ, ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ 7600 ಕೋಟಿ ನಿಗದಿ
- ಸಬ್ಸಿಡಿ ಕಡಿತಕ್ಕೆ ಹೊಸ ಯುಆರ್ಇಎ ಪಾಲಿಸಿ
- ವೆಚ್ಚ ನಿರ್ವಹಣಾ ಆಯೋಗ ಸ್ಥಾಪನೆಗೆ ನಿರ್ಧಾರ
- ಸರ್ದಾರ್ ವಲಭಬಾಯ್ ಪಟೇಲ್ ಪ್ರತಿಮೆಗೆ 200 ಕೋಟಿ
- 5 ಐಐಟಿ, 5 ಐಐಎಂ ಸ್ಥಾಪನೆ, 12 ವೈದ್ಯಕೀಯ ಕಾಲೇಜ್ ಸ್ಥಾಪನೆ
- ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಬಳಕೆಗಾಗಿ ಡಿಜಿಟಲ್ ಇಂಡಿಯಾ ಯೋಜನೆ ಜಾರಿ
- ಸುಸಜ್ಜಿತ ಕ್ಲಾಸ್ರೂಮ್ಗಳ ನಿರ್ಮಾಣಕ್ಕಾಗಿ 100 ಕೋಟಿ ರು.
- ಆಂಧ್ರಪ್ರದೇಶ, ಮಹಾರಾಷ್ಟ್ರದ(ವಿದರ್ಭ), ಪಶ್ಚಿಮ ಬಂಗಾಳ ಹಾಗೂ ಪೂರ್ವಂಚಲದಲ್ಲಿ ಏಮ್ಸ್ ಕಾಲೇಜುಗಳ ಸ್ಥಾಪನೆ
- ರಾಷ್ಟ್ರೀಯ ನೀರು ಸಂರಕ್ಷಣಾ ಯೋಜನೆಗಾಗಿ 2,100 ಕೋಟಿ ರು.
- ದೇಶದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಮಾದರಿಯ ನಾಲ್ಕು ಹೊಸ ಕಾಲೇಜುಗಳ ಸ್ಥಾಪನೆ
- ಬ್ಯಾಂಕ್ಗಳಿಗೆ ಹೆಚ್ಚಿನ ಸ್ವಾಯತತ್ತೆ ನೀಡುಲು ನಿರ್ಧಾರ
- ಗ್ರಾಮೀಣ ಕುಡಿಯುವ ನೀರಿನ ಯೋಜನೆಗಾಗಿ 3,600 ಕೋಟಿ ರು.
- ಸಾರಿಗೆ ಕ್ಷೇತ್ರಗಳಲ್ಲಿ ಮಹಿಳೆಯರ ಸುರಕ್ಷತೆಗೆ 150 ಕೋಟಿ ರು.
- ಗಂಗಾ ನದಿ ಶುದ್ಧೀಕರಣಕ್ಕೆ 2037 ಕೋಟಿ