ಬಜೆಟ್ ಎಫೆಕ್ಟ್: ಷೇರು ಮಾರುಕಟ್ಟೆಯಲ್ಲಿ 400 ಅಂಶಗಳ ಏರಿಕೆ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್...
ಮುಂಬೈ/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್ ಮಂಡನೆ ವೇಳೆ ದಿಢೀರ್ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆ, ತೆರಿಗೆ ಕಡಿತದ ಘೋಷಣೆ ಮಾಡುತ್ತಿದ್ದಂತೆಯೇ 400 ಅಂಶಗಳ ಚೇತರಿ ಕಂಡಿತು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ 2014-15ನೇ ಸಾಲಿನ ಬಜೆಟ್ ಮಂಡನೆ ವೇಳೆ ದಿಢೀರ್ ಇಳಿಕೆಯಿಂದಾಗಿ 25,117ಕ್ಕೆ ಕುಸಿದ ಮುಂಬೈ ಷೇರು ಸೂಚ್ಯಂಕ ಬಜೆಟ್ ನಂತರ ದಿಢೀರ್ ಏರಿಕೆ ಕಂಡು 25,782 ಅಂಶಗಳಿಗೆ ಏರಿಕೆ ಕಂಡು ಹಿಂದಿನ ಕುಸಿತವನ್ನು ಸರಿದೂಗಿಸಿಕೊಂಡು 300 ಅಂಶಗಳಷ್ಟು ಚೇತರಿಸಿಕೊಂಡಿತು.
ದಿನದ ಆರಂಭದಲ್ಲಿ 7,479.05ಕ್ಕೆ ಕುಸಿದಿದ್ದ ರಾಷ್ಟ್ರೀಯ ಸಂವೇಧಿ ಸೂಚ್ಯಂಕ ನಿಫ್ಟಿ, ಮಧ್ಯಾಹ್ನದ ವೇಳೆಗೆ 7,666.10 ಏರಿಕೆಯಾಗಿದೆ.