ಬಡವರ ವಿರೋಧಿ ಬಜೆಟ್: ಸೋನಿಯಾ
ಬಡವರ ವಿರೋಧಿ ಬಜೆಟ್: ಸೋನಿಯಾ, ಉದ್ಯಮಿಗಳಿಗೆ ರಿಲೀಫ್ : ಖರ್ಗೆ
ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಂದು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಂಡಿಸಿದ 2014-15ನೇ ಸಾಲಿನ ಬಜೆಟ್ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರದ ಮೊದಲ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಸೋನಿಯಾ, ಎನ್ಡಿಎ ಸರ್ಕಾರ ಯುಪಿಎ ಸರ್ಕಾರದ ಯೋಜನೆಗಳನ್ನು ನಕಲು ಮಾಡಿದೆ ಮತ್ತು ಪ್ರಸಕ್ತ ಸಾಲಿನ ಬಜೆಟ್ ಬಡವರ ವಿರೋಧಿಯಾಗಿದ್ದು, ಮಧ್ಯಮ ವರ್ಗ ಹಾಗೂ ಶ್ರೀಮಂತರ ಓಲೈಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಬಜೆಟ್ನಲ್ಲಿ ಸಾಮಾಜಿಕ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ದೂರಿದ್ದಾರೆ.
ಇನ್ನು ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿರುವ ಆಡಳಿತರೂಢ ಬಿಜೆಪಿ, ಅರುಣ್ ಜೇಟ್ಲಿ ಅವರು ಜನಪರವಾದ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದೆ.
ಈ ಬಜೆಟ್ ಉದ್ಯಮಿಗಳಿಗೆ ರಿಲೀಫ್ ನೀಡಿದೆ: ಖರ್ಗೆ
ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿನಿಂದಲೂ ಉದ್ಯಮಗಳಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅದು ಈ ಬಜೆಟ್ನಲ್ಲೂ ಮುಂದುವರೆದಿದೆ. ಅರುಣ್ ಜೇಟ್ಲಿ ಅವರ ಬಜೆಟ್ನಿಂದ ಉದ್ಯಮಿಗಳಿಗೆ ರಿಲೀಫ್ ಸಿಕ್ಕಿದೆ ಎಂದು ಕಾಂಗ್ರೆಸ್ ಲೋಕಸಭಾ ನಾಯಕ ಮಲ್ಲಕಾರ್ಜುನ್ ಖರ್ಗೆ ಅವರು ಹೇಳಿದ್ದಾರೆ.
ಇದು ಶ್ರೀಮಂತರ ಬಜೆಟ್, ಬಡವರಿಗೆ ಏನು ಇಲ್ಲ, ಬಾದಾಮಿ ತೋರಿಸಿ, ಕಡ್ಲೆಬೀಜ ನೀಡುತ್ತಿದ್ದಾರೆ.
- ಮುಲಾಯಂ ಸಿಂಗ್ ಯಾದವ್
ರಕ್ಷಣಾ ಕ್ಷೇತ್ರದಲ್ಲಿ 49% ಎಫ್ ಡಿಐ ಅವಕಾಶ ನೀಡಿರುವುದು ಆತಂಕಕಾರಿ.
-ಎ.ಕೆ. ಅಂಟನಿ
ಇದು ಯುಪಿಎ ಬಜೆಟ್ ಜೆರಾಕ್ಸ್ ಕಾಪಿ
-ಅರವಿಂದ್ ಕೇಜ್ರಿವಾಲ್