ಒಬಾಮಾ ಆಹ್ವಾನ; ಅಮೆರಿಕಾಗೆ ಹೋಗ್ತಾರಾ ಮೋದಿ?
ಅಮೆರಿಕಾಗೆ ಭೇಟಿ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ...
ನವದೆಹಲಿ: ಅಮೆರಿಕಾಗೆ ಭೇಟಿ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಆಮಂತ್ರಿಸಿದ್ದಾರೆ.
ಮೋದಿ ಅವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ವಾಷಿಂಗ್‌ಟನ್‌ಗೆ ಭೇಟಿ ನೀಡಿ ಎಂದು ಒಬಾಮಾ ಆಹ್ವಾನಿಸಿದ್ದು, ಆಮಂತ್ರಣ ಸ್ವೀಕರಿಸಿರುವ ಪ್ರಧಾನಿ ಒಬಾಮಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಉಭಯ ದೇಶಗಳ ದ್ವಿಪಕ್ಷೀಯ ಬಾಂದ್ಯವ್ಯ ವೃದ್ಧಿಗೆ ಮುಂದಾಗಿರುವ ಅಮೆರಿಕ, ಮೋದಿ ಅವರನ್ನು ಅಮೆರಿಕಾಗೆ ಆಹ್ವಾನಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮೋದಿ ಭೇಟಿ ನೀಡಿದರೇ, ಭಾರತ-ಅಮೆರಿಕ ದೇಶಗಳ ಆರ್ಥಿಕ ಬೆಳವಣಿಗೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಅಮೆರಿಕಾದ ಉಪಕಾರ್ಯದರ್ಶಿ ವಿಲಿಯಮ್ ಬರ್ನ್ಸ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ಉಭಯ ದೇಶಗಳ ದ್ವೀಪಕ್ಷೀಯ ಒಪ್ಪಂದದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಾರಾ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.
ಗೋಧ್ರಾ ಗಲಭೆ ಹಿನ್ನಲೆಯಲ್ಲಿ ನರೇಂದ್ರ ಮೋದಿಗೆ ವೀಸಾ ನಿರಾಕರಿಸಿತ್ತು. ತದ ನಂತರ ಅಮೆರಿಕ, ಮೋದಿ ಪ್ರಧಾನಿಯಾದ್ರೆ ವೀಸಾ ನಿಷೇಧ ರದ್ದಾಗುತ್ತದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಮೋದಿ ಅವರನ್ನು ಅಮೆರಿಕಾಗೆ ಒಬಾಮಾ ಆಹ್ವಾನಿಸಿದ್ದಾರೆ.