ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿ ವಿಶ್ವದ 2ನೇ ಜನನಿಬಿಡ ನಗರ!

ರಾಷ್ಟ್ರ ರಾಜಧಾನಿ ನವದೆಹಲಿ ಜಗತ್ತಿನ 2ನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ...

Vishwanath S
Updated On : 11 Jul 2014, 5:51 am

ವಿಶ್ವಸಂಸ್ಥೆ: ರಾಷ್ಟ್ರ ರಾಜಧಾನಿ ನವದೆಹಲಿ ಜಗತ್ತಿನ 2ನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿ ಹೊರ ಹೊಮ್ಮಿದೆ.

ಜಾಗತಿಕ ನಗರೀಕರಣ ಪ್ರಗತಿಗೆ ಸಂಬಂಧಿಸಿದ 2014ರ ವರದಿ ಪ್ರಕಾರ, ವಿಶ್ವದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿ ದಿಲ್ಲಿ ಬೆಳೆದುನಿಂತಿದೆ. 1990 ನಂತರದ ವರ್ಷಗಳಲ್ಲಿ ಸುಮಾರು 2.5 ಕೋಟಿಯಷ್ಟು ಜನಸಂಖ್ಯೆ ದುಪ್ಪಟ್ಟಾಗಿದೆ. ಇದು ಹೀಗೆ ಮುಂದುವರೆದರೆ 2050ರ ವೇಳೆಗೆ ಚೀನಾವನ್ನು ಭಾರತ ಹಿಂದಿಕ್ಕಲಿದೆ.

ದೆಹಲಿ ಜಗತ್ತಿನ ಎರಡನೇ ಜನನಿಬಿಡ ನಗರವಾಗಿದ್ದು, ಜಗತ್ತಿನ ನಂಬರ್ 1 ನಗರವಾಗಿರುವ ಟೋಕಿಯೋವನ್ನು 2030ರೊಳಗೆ ಹಿಂದಿಕ್ಕಲಿದೆ ಎಂದು ವರದಿಗಳು ಹೇಳಿದೆ.

ಟೋಕಿಯೋ ನಂಬರ್ 1

2014ರ ವರದಿ ಪ್ರಕಾರ, ಜಪಾನ್‌ನ ಟೋಕಿಯೋ ಜಗತ್ತಿನ ಅತಿ ಹೆಚ್ಚು  ಜನಸಂಖ್ಯೆ ಇರುವ ಮಹಾನಗರವಾಗಿದೆ. ಇಲ್ಲಿ ಸದ್ಯ 3.8 ಕೋಟಿ ಜನ ವಾಸವಿದ್ದಾರೆ. ಟೋಕಿಯೋದಲ್ಲಿ ಜನಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದ್ದು, 2030ರವರೆಗೂ ಮಾತ್ರ ಈ ನಗರ ನಂ 1 ಆಗಿ ಉಳಿಯಲಿದ್ದು, ಆ ನಂತರ ದೆಹಲಿ ಅಗ್ರ ಸ್ಥಾನ ಪಡೆಯುವ ಸಾಧ್ಯತೆ ಇದೆ. 2030ರ ವೇಳೆಗೆ ದೆಹಲಿ ಜನಸಂಖ್ಯೆ 3.6 ಕೋಟಿಗೆ ಏರಲಿದೆ. ಆಗ ಇಲ್ಲಿನ ಜನಸಂಖ್ಯೆ 3.7 ಕೋಟಿ ಆಗಿರಲಿದೆ ಎಂದು ವರದಿಗಳು ತಿಳಿಸಿವ.ೆ

ಭಾರತದ ಇತರ ರಾಜ್ಯಗಳ ಪೈಕಿ ಮುಂಬೈ ಆರನೇ ಸ್ಥಾನದಲ್ಲಿದೆ. ಸದ್ಯ 2.1 ಕೋಟಿ ಜನಸಂಖ್ಯೆ ಹೊಂದಿರುವ ಈ ನಗರ 2030 ವೇಳೆಗೆ 2.8 ಕೋಟಿ ನಿವಾಸಿಗಳನ್ನು ಹೊಂದುವ ಮೂಲಕ ಜಗತ್ತಿನಲ್ಲೇ 4 ನೇ ಸ್ಥಾನ ಹೊಂದಲಿದೆ ಎಂದು ವರದಿ ಹೇಳಿದೆ.

ಸದ್ಯ ಟೋಕಿಯೋ ಮೊದಲ ಸ್ಥಾನದಲ್ಲಿದ್ದು, ದಿಲ್ಲಿ ನಂತರದ ಸ್ಥಾನದಲ್ಲಿ 2.3 ಕೋಟಿ ಜನಸಂಖ್ಯೆ ಇರುವ ಶಾಂಘೈ, ಮೆಕ್ಸಿಕೋ 2.1 ಕೋಟಿ ಜನರಿರುವ ಸಾವೋ ಪೌಲೊ ಹಾಗೂ ಮುಂಬಿಯಿ ಗೂಡ 2014ರ ಪಟ್ಟಿಯಲ್ಲಿ ಅಗ್ರಸ್ಧಾನಗಳನ್ನು ಹಂಚಿಕೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement