ಹಿಮಾಲಯದಲ್ಲಿ ವಿಶ್ವದ ಅತಿ ಎತ್ತರದ ರೇಲ್ವೆ ಸೇತುವೆ ನಿರ್ಮಾಣ
ಪ್ಯಾರಿಸ್‌ನ ಐಫೆಲ್ ಟವರ್‌ನ 35 ಮೀಟರ್‌ಗಿಂತ ಎತ್ತರದ ರೇಲ್ವೆ...
ಕೌರಿ: ಪ್ಯಾರಿಸ್‌ನ ಐಫೆಲ್ ಟವರ್‌ನ 35 ಮೀಟರ್‌ಗಿಂತ ಎತ್ತರದ ರೇಲ್ವೆ ಸೇತುವೆಯನ್ನು ಹಿಮಾಲಯ ಪರ್ವತಗಳ ಶ್ರೇಣಿಯಲ್ಲಿ ನಿರ್ಮಾಣ ಮಾಡಲು ಭಾರತೀಯ ಇಂಜಿನಿಯರ್‌ಗಳು ಸಿದ್ಧತೆ ನಡೆಸಿದ್ದು, ಇದರ ನಿರ್ಮಾಣ ಕಾರ್ಯ 2016ರ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ಜಮ್ಮು ಕಾಶ್ಮೀರದ ಉತ್ತರ ಭಾಗದಲ್ಲಿರುವ ಚೆನಾಬ್ ನದಿ ದಂಡೆಯ ಮೇಲೆ ಕಬ್ಬಿಣವನ್ನು ಬಳಸಿ ಬಿಲ್ಲಿನಾಕಾರದ ಸೇತುವೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಈ ಸೇತುವೆ ಸುಮಾರು 1177 ಅಡಿ ಎತ್ತರವಾಗಿರಲಿದ್ದು, ವಿಶ್ವದಲ್ಲಿಯೇ ಅತಿ ಎತ್ತರದ ರೇಲ್ವೆ ಸೇತುವೆ ಎನ್ನುವ ಖ್ಯಾತಿ ಪಡೆಯಲಿದೆ. ಚೀನಾದ ಬೈಪಸ್ ಜಿಯಾಂಗ್ ನದಿಯ ಮೇಲೆ ನಿರ್ಮಿಸಲಾದ ಸೇತುವೆ 275 ಮೀಟರ್ ಎತ್ತರವಾಗಿದೆ.
2016ರ ವೇಳೆಗೆ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದ್ದು, ಸೇತುವೆಯನ್ನು ಭೂಕಂಪ ಮತ್ತು ಬಿರುಗಾಳಿ ನಿರೋಧಕವಾಗಿರಲಿದೆ ಎಂದು ಭಾರತೀಯ ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆ ನಿರ್ಮಾಣದ ಹೊಣೆಯನ್ನು ಕೊಂಕಣ್ ರೇಲ್ವೆ ಅಧಿಕಾರಿಗಳು ಹೊತ್ತಿದ್ದು, ಅಂದಾಜು 92 ಮಿಲಿಯನ್ನು ಡಾಲರ್ ವೆಚ್ಚಲಾಗಲಿದೆ ಎಂದು ಇಂಜಿನಿಯರ್‌ಗಳು ತಿಳಿಸಿದ್ದಾರೆ.
ವಿಶ್ವದ ಅತಿ ಎತ್ತರದ ಸೇತುವೆ ಬಾರಾಮುಲ್ಲಾದಿಂದ ಜಮ್ಮುವಿಗೆ ಸಂಪರ್ಕ ಒದಗಿಸಲಿದೆ. ಈ ಸೇತುವೆ ನಿರ್ಮಾಣದಿಂದ ಪ್ರಯಾಣ ಅವಧಿ ಆರು ಗಂಟೆ ಕಡಿಮೆಯಾಗಲಿದೆ.