ಗಾಜಾ ಹಿಂಸೆ: 120ಕ್ಕೇರಿದ ಸಾವಿನ ಸಂಖ್ಯೆ
ಗಾಜಾ/ಜೆರುಸಲೆಮ್: ಗಾಜಾದಲ್ಲಿ ಪ್ಯಾಲೆಸ್ತೀನ್ ಉಗ್ರರ ಹಾಗೂ ಇಸ್ರೇಲ್ ನಡುವಿನ ಹಿಂಸಾಚಾರದಲ್ಲಿ ಸುಮಾರು 120ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಗಾಜಾ ಪಟ್ಟಿಯಲ್ಲಿ ಪ್ಯಾಲೆಸೀನ್ ಉಗ್ರರ ಮೇಲೆ ಇಸ್ರೇಲ್ ದಾಳಿ ಆರಂಭಿಸಿ ಇಂದಿಗೆ ಐದು ದಿನವಾಗಿದ್ದು, ಹಿಂಸಾಚಾರ ನಿಲ್ಲುವ ಯಾವುದೇ ಸೂಚನೆ ಕಾಣಿಸುತ್ತಿಲ್ಲ. ಇಂದು ನಡೆದ ದಾಳಿಯಲ್ಲಿ ಇಬ್ಬರು ವಿಕಲಚೇತನ ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ಕದನ ವಿರಾಮ ನಡೆಸಲು ಅಂತಾರಾಷ್ಟ್ರೀಯ ಒತ್ತಡಗಳು ಬಂದರೂ ಎರಡೂ ಪಕ್ಷಗಳು ಯುದ್ಧ ನಿಲ್ಲಿಸಲು ಮನಸ್ಸು ಮಾಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಇದೀಗ ಬಹುತೇಕ ವಾಯುದಾಳಿಯ ಮೂಲಕ ರಾಕೆಟ್ಗಳನ್ನು ಸಿಡಿಸಿ ಯುದ್ಧ ನಡೆಸುತ್ತಿರುವ ಇಸ್ರೇಲ್, ಭೂಯುದ್ಧ ಮಾಡುವ ಸಂಭವವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತಾನ್ಯಹು, ನಾವು ಎಲ್ಲ ಸಾಧ್ಯತೆಗಳನ್ನೂ ಮುಕ್ತವಾಗಿಟ್ಟಿದ್ದು ಅಳೆದೂ ತೂಗಿ ನಿರ್ಧಾರಕ್ಕೆ ಬರಲಿದ್ದೇವೆ ಎಂದು ತಿಳಿಸಿದ್ದಾರೆ.