ಚೆನ್ನೈನ ಎಸ್‌ಬಿಐ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ
ಚೆನ್ನೈ: ಚೆನ್ನೈನಲ್ಲಿರುವ ಎಸ್‌ಬಿಐ ಕಟ್ಟಡದಲ್ಲಿ ಶನಿವಾರ ಮಧ್ಯಾಹ್ನ ಅಗ್ನಿ ಅವಗಡ ಸಂಭವಿಸಿದೆ.
ಸುಮಾರು 200 ವರ್ಷಗಳ ಹಳೆಯ ಕಟ್ಟಡವಾಗಿದ್ದು, ಕಟ್ಟಡದ 2ನೇ ಹಾಗೂ 3ನೇ ಅಂತಸ್ಥಿನಲ್ಲಿ ಬೆಂಕಿ ಉರಿಯುತ್ತಿದೆ. ಈ ಬೆಂಕಿ ಅವಗಡದಲ್ಲಿ ಪ್ರಮುಖ ದಾಖಲೆ ಪತ್ರಗಳು ಸೇರಿದಂತೆ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಸುಮಾರು ಒಂದು ಕಿ.ಮೀವರೆಗೂ ದಟ್ಟ ಹೊಗೆ ವ್ಯಾಪಿಸಿದೆ.
ಸುಮಾರು 30 ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, 150 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಅವಗಡದಲ್ಲಿ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ.
ಎಸ್‌ಬಿಐ ಕಟ್ಟಡ ಸುಮಾರು 200 ವರ್ಷಗಳ ಪುರಾತನ ಕಟ್ಟಡವಾಗಿದೆ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಧರೆಗುರುಳುವ ಸಾಧ್ಯತೆ ಇರುವುದರಿಂದ ಅಗ್ನಿ ಶಾಮಕ ಸಿಬ್ಬಂದಿ ಸುಮಾರು 200 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.