ಪುಣೆ ಸ್ಫೋಟ: ಸಿಸಿಟಿವಿಯಲ್ಲಿ ಉಗ್ರರ ಕೃತ್ಯ ಬಯಲು
ಪುಣೆ: ಪುಣೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮಹಾರಾಷ್ಟ್ರ ಭಯೋತ್ಪಾದನ ನಿಗ್ರ ದಳ ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಮಹತ್ವದ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ.
ಸಿಸಿಟಿವಿ ದೃಶ್ಯವಳಿಗಲ್ಲಿ ಬಾಂಬ್ ಸ್ಫೋಟಕ್ಕೂ ಮುನ್ನ ಇಂಡಿಯನ್ ಮುಜಾಯಿದ್ದೀನ್ ಸಂಘಟನೆಯ ಉಗ್ರರು ಪರಸ್ಪರ ಸಂಭಾಷಣೆ ನಡೆಸಿರುವುದು ತಿಳಿದುಬಂದಿದೆ.
ಪುಣೆಯಲ್ಲಿ ಗುರುವಾರ ನಡೆದ ಸ್ಫೋಟ ಪ್ರಕರಣದಲ್ಲಿ ಐಎಂ ಉಗ್ರ ಕೈವಾಡ ಇರುವುದು ಸಿಸಿ ಕ್ಯಾಮೆರಾ ಮೂಲಕ ಬೆಳಕಿಗೆ ಬಂದಿದ್ದು, ಶಂಕಿತ ಉಗ್ರನೊಬ್ಬ ಸ್ಫೋಟಕ್ಕೂ ಮುನ್ನ ಸ್ಫೋಟ ಸಂಭವಿಸಿದ ಫರಸ್ತಾನಾ ಪೊಲೀಸ್ ಠಾಣೆ ಬಳಿ ತನ್ನ ಮೋಟಾರ್ ಬೈಕ್‌ನ್ನು ನಿಲ್ಲಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಫೋಟಕ್ಕೂ ಮುನ್ನ ಇಂಡಿಯನ್ ಮುಜಾಹಿದ್ದೀನ್ ಸದಸ್ಯರು, ಕರಾಚಿಯಲ್ಲಿರುವ ಸಂಘಟನೆಯ ಇತರ ಪ್ರಮುಖರ ಜತೆ ಆನ್‌ಲೈನ್‌ನಲ್ಲಿ ಸಂಭಾಷಣೆ ನಡೆಸಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
ಪುಣೆಯ ಫರಸ್ತಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ಪೊಲೀಸ್ ಪೇದೆ ಸಹಿತ ಐವರು ಗಾಯಗೊಂಡಿದ್ದರು. ಮೋಟಾರ್ ಬೈಕ್‌ನ ಡಿಕ್ಕಿಯಲ್ಲಿ ಸ್ಫೋಟಕ ಇರಿಸಿ ಸ್ಫೋಟಿಸಲಾಗಿತ್ತು. ಸ್ಫೋಟದ ತೀವ್ರತೆ ಕಡಿಮೆ ಇದ್ದ ಕಾರಣ ಹೆಚ್ಚಿನ ಅನಾಹುತಗಳಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸತೀಶ್ ಮಾಥೂರ್ ತಿಳಿಸಿದ್ದಾರೆ.