ಪುಣೆ ಸ್ಫೋಟ: ಎಟಿಎಸ್ನಿಂದ ಐಎಂ ಉಗ್ರರ ವಿಚಾರಣೆ
ಪುಣೆ: ಕಳೆದ ಗುರುವಾರ ಪುಣೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಧಿಸಿದಂತೆ ಮಹಾರಾಷ್ಟ್ರ ಭಯೋತ್ವಾದಕ ವಿರೋಧಿ ದಳದ ಪೊಲೀಸರು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಭಾರತದಲ್ಲಿ ವಿವಿಧ ಕಡೆ ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ್, ಹೈದರ್ ಅಲಿ ಮತ್ತು ಅಸಾದುಲ್ಲಾ ಅಕ್ತರ್ನನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗಿ ಸ್ಫೋಟ ಪ್ರಕರಣದಲ್ಲಿ ಐಎಂ ಉಗ್ರರ ಕೈವಾಡ ಇರುವುದು ತಿಳಿದು ಬಂದಿತ್ತು. ಸ್ಫೋಟಕ್ಕೂ ಮುನ್ನ ಇಂಡಿಯನ್ ಮುಜಾಹಿದ್ದೀನ್ ಸದಸ್ಯರು, ಕರಾಚಿಯಲ್ಲಿರುವ ಸಂಘಟನೆಯ ಇತರ ಪ್ರಮುಖರ ಜತೆ ಆನ್ಲೈನ್ನಲ್ಲಿ ಸಂಭಾಷಣೆ ನಡೆಸಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.
ಪುಣೆಯ ಫರಸ್ತಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ಪೊಲೀಸ್ ಪೇದೆ ಸಹಿತ ಐವರು ಗಾಯಗೊಂಡಿದ್ದರು.