ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇಳಿಕೆ ಕಂಡ ಹಣದುಬ್ಬರ

ಕೇಂದ್ರದಲ್ಲಿ ಅಧಿಕಾರಕ್ಕೇರಿರುವ ನೂತನ ಸರ್ಕಾರ ಕೃಷಿ ಉತ್ಪನ್ನಗಳ ರಫ್ತಿಗೆ ಪ್ರತಿಬಂಧ ಹೇರಿರುವ ಕಾರಣ...

Rashmi Kasaragodu
Updated On : 14 Jul 2014, 4:54 am

ನವದೆಹಲಿ: ಕೇಂದ್ರದಲ್ಲಿ ಅಧಿಕಾರಕ್ಕೇರಿರುವ ನೂತನ ಸರ್ಕಾರ ಕೃಷಿ ಉತ್ಪನ್ನಗಳ ರಫ್ತಿಗೆ ಪ್ರತಿಬಂಧ ಹೇರಿರುವ ಕಾರಣ, ಈ ಬಾರಿ ಹಣದುಬ್ಬರದಲ್ಲಿ ಇಳಿಕೆ ಕಂಡಿದೆ. ಕಳೆದ ನಾಲ್ಕು ತಿಂಗಳುಗಳ ಹಣದುಬ್ಬರದ ದರವನ್ನು ಹೋಲಿಸಿದರೆ ಜೂನ್ ತಿಂಗಳಲ್ಲಿ ಹಣದುಬ್ಬರ ಕಡಿಮೆಯಾಗಿದೆ.  ಆದರೆ ಮಳೆ ಸರಿಯಾಗಿ ಬರದೇ ಇದ್ದರೆ ಆಹಾರೋತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ.

ಮೇ ತಿಂಗಳಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದಾಗ ಹಣದುಬ್ಬರ ಅಧಿಕವಾಗಿತ್ತು. ಅದರಲ್ಲೂ ಆಹಾರದ ಹಣದುಬ್ಬರ ಜಾಸ್ತಿಯಾಗಿದ್ದರಿಂದ ಇದನ್ನು ನಿಯಂತ್ರಿಸಲು ಈರುಳ್ಳಿ ಮತ್ತು ಬಟಾಟೆ ಮೊದಲಾದ ತರಕಾರಿಗಳ ರಫ್ತಿಗೆ ಪ್ರತಿಬಂಧ ಹೇರಲಾಗಿತ್ತು.

ಈ ರೀತಿ ಮಾಡಿದ್ದರಿಂದ ಕಳೆದ ತಿಂಗಳು 9.50 ಪ್ರತಿಶತದಷ್ಟಿದ್ದ ಹಣದುಬ್ಬರ ದರ ಜೂನ್ ತಿಂಗಳಲ್ಲಿ 8.14 ಪ್ರತಿಶತಕ್ಕೆ ಇಳಿಕೆಯಾಗಿದೆ.

ಅದೇ ವೇಳೆ ಇರಾಕ್‌ನಲ್ಲಿನ ಸಂಘರ್ಷದಿಂದಾಗಿ ತೈಲ ಬೆಲೆ ಹಾಗು ಮಳೆ  ಕೈಕೊಟ್ಟಿರುವುದರಿಂದ ಆಹಾರವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ

ಈ ಬಾರಿ ದೇಶಕ್ಕೆ ಮುಂಗಾರು ತಡವಾಗಿ ಕಾಲಿಟ್ಟಿರುವುದರಿಂದ ದಿನನಿತ್ಯದ ಬಳಕೆ ವಸ್ತುಗಳಾದ ಹಾಲು, ಬಟಾಟೆ ಮತ್ತು ಟೊಮ್ಯಾಟೋ ಬೆಲೆ ಈಗಾಗಲೇ ಏರಿಕೆಯಾಗಿದೆ. ಏತನ್ಮಧ್ಯೆ, ದೇಶದ ಆರ್ಥಿಕ ಸ್ಥಿತಿಯನ್ನು ಸಮತೋಲನಗೊಳಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರವನ್ನು ಕಡಿತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement