ಫೋರಂ ಮಾಲ್‌ನಲ್ಲಿ ಎಲ್ಐಎಫ್ಇ ಕ್ಲಬ್ ಉದ್ಘಾಟನೆ
ಬೆಂಗಳೂರು: ವೈಟ್‌ಫೀಲ್ಡ್ ನಲ್ಲಿರುವ ಫೋರಂ ವ್ಯಾಲ್ಯೂ ಮಾಲ್ ಪೋಷಕರು ಹಾಗೂ ಮಕ್ಕಳಿಗಾಗಿ ವಿಶಿಷ್ಟವಾದ ಎಲ್.ಐ.ಎಫ್.ಇ ಸಾಮಾಜಿಕ ಕ್ಲಬ್ ಅನ್ನು ಆರಂಭಿಸಿದೆ. ಛೋಟು ಪೇಯಿಂಟರ್ನ ಸಹಯೋಗದೊಂದಿಗೆ ಆರಂಭಿಸಿರುವ ಈ ಕ್ಲಬ್, ಮಾಲ್ ಪ್ರದೇಶದಲ್ಲಿ ಪೋಷಕರು ಹಾಗೂ ಮಕ್ಕಳು ಮನರಂಜನೆ ಹಾಗೂ ಸಮುದಾಯದೊಂದಿಗೆ ಬೆರೆಯಲು ಅವಕಾಶವನ್ನು ಒದಗಿಸುವ ಉದ್ದೇಶದೊಂದಿಗೆ ಆರಂಭಿಸಲಾಗಿದೆ.
ಎಲ್.ಐ.ಎಫ್.ಇ, (Learning, Interaction, Fun and Entertainment) ಕಲಿಕೆ, ಪರಸ್ಪರ ಚಚರ್ೆ, ವಿನೋದ ಹಾಗೂ ಮನರಂಜನೆ ಎಂಬ ನಾಲ್ಕು ಪ್ರಮುಖ ಅಂಶಗಳನ್ನು ಆಧರಿಸಿದೆ. ಈ ಕ್ಲಬ್, ವಾರಾಂತ್ಯದ ದಿನಗಳಲ್ಲಿ ವಿವಿಧ ಕ್ರಿಯಾತ್ಮಕ ಕಾಯರ್ಾಗಾರಗಳು, ಕಲೆಗೆ ಸಂಬಂಧಿಸಿದ ಕಾರ್ಯಕ್ರಮಗಳು, ಶಾಲಾ ಮಕ್ಕಳಿಗಾಗಿ ವಿಶೇಷ ಟ್ರಿಪ್ಗಳು, ಹುಟ್ಟುಹಬ್ಬ ಆಚರಣೆಯ ಸಮಾರಂಭಗಳು ಹಾಗೂ ಇತರೆ ಚಟುವಟಿಕೆಗಳನ್ನು ಆಯೋಜಿಸುತ್ತದೆ.
ಈ ಕ್ಲಬ್ಗೆ ಸೇರುವ ಮಕ್ಕಳು ವರ್ಷಪೂತರ್ಿ ವಿವಿಧ ವೈಶಿಷ್ಟ್ಯಪೂರ್ಣ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ. ಪೋಷಕರು ಮಾಲ್‌ನಲ್ಲಿ ಷಾಪಿಂಗ್ ಮಾಡುವಾಗ, ಮಕ್ಕಳು ಅರ್ಥಪೂರ್ಣ ಹಾಗೂ ಉಪಯುಕ್ತ ಚಟುವಟಿಕೆಯಲ್ಲಿ ತೊಡಗುವ ಅವಕಾಶ ಕಲ್ಪಿಸಿಕೊಡುವುದು ಈ ಕ್ಲಬ್ನ ಪ್ರಮುಖ ಉದ್ದೇಶವಾಗಿದೆ.
ಲೈಫ್ ಕ್ಲಬ್ನ ಉದ್ಘಾಟನಾ ಕೊಡುಗೆಯಾಗಿ ಮೊದಲು ನೋಂದಣಿಯಾದ 50 ಜನರಿಗೆ ನೋಂದಣಿ ಶುಲ್ಕದಲ್ಲಿ 25% ರಿಯಾಯಿತಿಯನ್ನು ಘೋಷಿಸಲಾಯಿತು! ಕ್ಲಬ್ನ ಸದಸ್ಯತ್ವ ಪಡೆಯಲು 3 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಅವಕಾಶವಿರುತ್ತದೆ. ಸುಲಭ ವಾಷರ್ಿಕ ಸದಸ್ಯತ್ವ ಯೋಜನೆಯೊಂದಿಗೆ ನೋಂದಣಿಯನ್ನು ಮಾಡಿಕೊಳ್ಳಬಹುದು. ಸದಸ್ಯರು ಪಿಕ್ನಿಕ್ಗಳು, ಉಚಿತ ಉಡುಗೊರೆಗಳು ಹಾಗೂ ಕ್ಲಬ್ ಕ್ಯಾಂಪ್ಗಳಲ್ಲಿ ಹಾಗೂ ಇತರೆ ಚಟುವಟಿಕೆಗಳಿಗೆ ರಿಯಾಯಿತಿಗಳನ್ನು ಪಡೆಯುತ್ತಾರೆ?