ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಾಜಾ ಕದನ ವಿರಾಮಕ್ಕೆ ಒಪ್ಪಿದ ಇಸ್ರೇಲ್

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಕೊನೆಗೊಳ್ಳುವ ಕ್ಷಣಗಳು ಸನ್ನಿಹಿತವಾಗಿದೆ. ಗಾಜಾ...

Rashmi Kasaragodu
Updated On : 15 Jul 2014, 3:47 am

ಜೆರುಸಲೇಂ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಕೊನೆಗೊಳ್ಳುವ ಕ್ಷಣಗಳು ಸನ್ನಿಹಿತವಾಗಿದೆ. ಗಾಜಾ ಪಟ್ಟಿಯಲ್ಲಿರುವ ನಗರಗಳ ಮೇಲೆ ವಾಯು ದಾಳಿ ನಡೆಸುತ್ತಿದ್ದ ಇಸ್ರೇಲ್ ಮಂಗಳವಾರ ಗಾಜಾ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಆದರೆ ಪಾಲೆಸ್ತೀನ್‌ನ ಉಗ್ರ ಸಂಘಟನೆಯಾದ ಹಮಾಸ್ ಈಜಿಪ್ಟ್ ಪ್ರಸ್ತಾಪಿಸಿರುವ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲು ನಿರಾಕರಿಸಿದೆ.

ನಾವು ಗಾಜಾ ಪಟ್ಟಿಯಲ್ಲಿ ದಾಳಿ ನಡೆಸುವುದನ್ನು ನಿಲ್ಲಿಸಿದ್ದೇವೆ. ಆದರೆ ಉಗ್ರರು ಇಸ್ರೇಲ್ ಮೇಲೆ 22 ರಾಕೆಟ್ ದಾಳಿ ನಡೆಸಿದ್ದು, ಇದರಿಂದ ನಾಶ ನಷ್ಟಗಳು ಸಂಭವಿಸಿದೆ ಎಂದು ಇಸ್ರೇಲ್‌ನ ರಕ್ಷಣಾ ಪಡೆ ಟ್ವೀಟ್ ಮಾಡಿದೆ.

ಈಜಿಪ್ಟ್ ಪ್ರಸ್ತಾಪ ಮಾಡಿರುವ ಗಾಜಾ ಕದನ ವಿರಾಮದ ಬಗ್ಗೆ ಇಸ್ರೇಲ್ ರಕ್ಷಣಾ ಸಚಿವ ಸಂಪುಟ ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಟನ್ಯಾಹು ಹೇಳಿದ್ದಾರೆ.

ಆದಾಗ್ಯೂ, ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸಿದ್ದರೂ, ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೆ ನೀಡಿದೆ.

ಕಳೆದ ಒಂದು ವಾರದಿಂದ ನಡೆದು ಬರುತ್ತಿರುವ ಈ ದಾಳಿಯಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement