ಜು.19ಕ್ಕೆ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು: ಜುಲೈ 19 ರಿಂದ 20ರವರೆಗೆ ಬೆಂಗಳೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಶ್, ಜುಲೈ 19ರಿಂದ 20ರವರೆಗೆ ದಂಡು ಪ್ರದೇಶದ ಇಂಡಿಯನ್ ಕ್ಯಾಂಪಸ್ ಆವರಣದಲ್ಲಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ವೇಳೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 25 ಗಣ್ಯರನ್ನು ವಾರ್ತ ಸಚಿವ ರೋಷನ್ಬೇಗ್ ಅವರು ಸನ್ಮಾನಿಸಲಿದ್ದಾರೆಂದು ತಿಮ್ಮೇಶ್ ತಿಳಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಮೆಯೋಹಾಲ್ ನಿಂದ ದ್ವಿಚಕ್ರ ವಾಹನಗಳ ಜಾಥ ಹಾಗು ಜಾನಪದ ಕಲಾತಂಡಗಳ ಪ್ರದರ್ಶನ, ಕನ್ನಡ ಜಾಗೃತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಬಹುಭಾಷಾ ಪಂಡಿತರಾದ ಪ್ರೋ ಏಜಾಸುದ್ದೀನ್ ಸೇರಿದಂತೆ ಗೃಹ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ , ಉಮಾಶ್ರೀ , ಸಂಸದ ಪಿ.ಸಿ. ಮೋಹನ್ ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ಜಗನ್ನಾಥ ರೆಡ್ಡಿ ಹೇಳಿದ್ದಾರೆ.