ಪ್ರವರ್ಗ 2ಎಗೆ ಸೇರಿಸಲು ಬಲಿಜ ಸಂಘ ಅಗ್ರಹ
ಬೆಂಗಳೂರು: ಬಲಿಜ ಜನಾಂಗವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಜುಲೈ 17ರಂದು ಟೌನ್‌ಹಾಲ್ ಬಳಿ ಧರಣಿ ನಡೆಸುವುದಾಗಿ ಕರ್ನಾಟಕ ಬಲಿಜ
ಸಂಘದ ಅಧ್ಯಕ್ಷ ಎ.ಧನರಾಜ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದ ಧನರಾಜ್, ಹಿಂದುಳಿದ ನಮ್ಮ ಬಲಿಜ ಜಾತಿಯನ್ನು ಪ್ರವರ್ಗ 3ಎಗೆ ಸೇರಿಸಿರುವುದರಿಂದ ಸರ್ಕಾರದಿಂದ ನಮಗೆ ಯಾವ ಸೌಲಭ್ಯಗಳು ಇದೂವರೆಗು ಸಿಕ್ಕಿಲ. ಆದ್ದರಿಂದ ಬಲಿಜ ಜನಾಂಗವನ್ನು ಪ್ರವರ್ಗ 2ಎಗೆ ಸೇರಿಸಬೇಕೆಂದು ಒತ್ತಾಯಿಸಿದರು.
ನಮ್ಮ ಜನಾಂಗಕ್ಕೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗು ರಾಜಿಕೀಯವಾಗಿ ಸರ್ಕಾರ ಆದ್ಯತೆ ನೀಡುವ ಮೂಲಕ ಸೂಕ್ತ ಸ್ಥಾನಮಾನ ನೀಡಬೇಕೆಂದು ಧನರಾಜ್ ಅಗ್ರಹಿಸಿದರು.