ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭಾರತ-ಚೀನಾ ಭೇಟಿ ವಿಶ್ವದ ಗಮನ ಸೆಳೆಯುತ್ತದೆ: ಚೀನಾ ಪ್ರಧಾನಿ

ಭಾರತ-ಚೀನಾ ಭೇಟಿ ತುಂಬಾ ಮಹತ್ವದ್ದಾಗಿದ್ದು, ಉಭಯ ದೇಶಗಳ ನಾಯಕರ ಭೇಟಿ ವಿಶ್ವದ ಗಮನ ಸೆಳೆಯುತ್ತದೆ...

Lingaraj Badiger
Updated On : 15 Jul 2014, 12:17 pm

ನವದೆಹಲಿ: ಭಾರತ-ಚೀನಾ ಭೇಟಿ ತುಂಬಾ ಮಹತ್ವದ್ದಾಗಿದ್ದು, ಉಭಯ ದೇಶಗಳ ನಾಯಕರ ಭೇಟಿ ವಿಶ್ವದ ಗಮನ ಸೆಳೆಯುತ್ತದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಹೇಳಿದ್ದಾರೆ.

ಇಂದು ಬ್ರಜಿಲ್‌ನಲ್ಲಿ ಉಭಯ ದೇಶಗಳ ನಾಯಕರು ಭೇಟಿ ಮಾಡಿದ್ದು, ಈ ವೇಳೆ ಗಡಿ ಅತಿಕ್ರಮಣ, ಗಡಿಯಲ್ಲಿ ಶಾಂತಿ ಸ್ಥಾಪಿಸುವುದು ಸೇರಿದಂತೆ ಗಡಿ ವಿವಾದವನ್ನು ಪರಿಹರಿಸಿಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು. ಈ ವೇಳೆ ನವೆಂಬರ್‌ನಲ್ಲಿ ಬೀಜಿಂಗ್‌ನಲ್ಲಿ ನಡೆಯುವ ಏಷ್ಯಾ ಪೆಸಿಫಿಕ್ ನಾಯಕರ ಸಮ್ಮೇಳನದಲ್ಲಿ ಭಾಗವಹಿಸುವಂತೆ ಚೀನಾ ಅಧ್ಯಕ್ಷರು ಮೋದಿಗೆ ಆಹ್ವಾನ ನೀಡಿದ್ದಾರೆ.

ಮೋದಿ ಅವರು ಮೊದಲ ಬಾರಿಗೆ ತಾವು ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ ಚಿತ್ರವನ್ನು ಟ್ವಿಟರ್‌ನಲ್ಲಿ ಪೊಸ್ಟ್ ಮಾಡಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆದ ಭೇಟಿ ಫಲಪ್ರದವಾಗಿದೆ ಮತ್ತು ಹಲವು ವಿಷಯಗಳನ್ನು ಚರ್ಚಿಸಲಾಯಿತು ಎಂದು ಹೇಳಿದ್ದಾರೆ.

ಇನ್ನು ಪ್ರಧಾನಿ ಮೋದಿ ಸಹ ಭಾರತಕ್ಕೆ ಭೇಟಿ ನೀಡುವಂತೆ ಚೀನಾ ಅಧ್ಯಕ್ಷರಿಗೆ ಆಹ್ವಾನ ನೀಡಿದ್ದು, ಜೀನ್‌ಪಿಂಗ್ ಅವರು ಮೋದಿ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement