ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೊಬೈಲ್, ನಾನ್ ವೆಚ್ ಅತ್ಯಾಚಾರಕ್ಕೆ ಪ್ರೇರೆಪಿಸುತ್ತದೆ: ಬಿನಯ್ ಬಿಹಾರಿ

Vishwanath S
Updated On : 15 Jul 2014, 7:50 am

ಪಾಟ್ನಾ: ಮೊಬೈಲ್ ಮತ್ತು ನಾನ್ ವೆಚ್ ಅತ್ಯಾಚಾರಕ್ಕೆ ಪ್ರೇರೆಪಿಸುತ್ತಿದೆ ಎಂದು ಬಿಹಾರದ ಕಲೆ, ಸಂಸ್ಕೃತಿ ಮತ್ತು ಯುವ ವ್ಯವಹಾರಗಳ ಸಚಿವ ಬಿನಯ್ ಬಿಹಾರಿ ಅವರು ಹೇಳಿದ್ದಾರೆ.

ಶಾಲಾ ಮಕ್ಕಳಿಗೆ ಮೊಬೈಲ್ ಫೋನ್‌ಗಳು ಸಿಗುತ್ತಿರುವುದರಿಂದ ಮಕ್ಕಳು ಅದನ್ನು ಉಪಯೋಗಕ್ಕಿಂತ ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಶ್ಲೀಲ ಚಿತ್ರಗಳನ್ನು ಹಾಗೂ ಅಶ್ಲೀಲ ಹಾಡುಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಹೀಗಾಗಿ ಮೊದಲಿಗೆ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಬೇಕು ಎಂದಿದ್ದಾರೆ.

ಇತ್ತೀಚಿಗೆ ತಾವು ಕೆಲವೊಂದು ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟಾಗ ಶಾಲಾ ಮಕ್ಕಳು ಅತ್ಯಾಧುನಿಕ ಮೊಬೈಲ್‌ಗಳನ್ನು ಬಳಸುತ್ತಿರುವುದು ಕಂಡುಬಂದಿತ್ತು. ಅಲ್ಲದೆ ತಮ್ಮ ಮೊಬೈಲ್‌ಗಳಿಂದ ಅಶ್ಲೀಲ ಎಸ್‌ಎಂಎಸ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದರು ಬಿನಯ್ ಬಿಹಾರಿ ಹೇಳಿದರು.

ಸಣ್ಣ ಹುಡುಗರು ಮೊಬೈಲ್‌ಗಳಲ್ಲಿ ಅಶ್ಲೀಲ ಚಿತ್ರಗಳು ಹಾಗೂ ಅಶ್ಲೀಲ ಹಾಡುಗಳನ್ನು ಕೇಳುತ್ತಿರುವುದು ಅತ್ಯಾಚಾರಕ್ಕೆ ಕಾರಣವಾಗುತ್ತಿದೆ. ಮಕ್ಕಳಿಗೆ ಇಂಟರ್ನೆಟ್ ಇರುವ ಮೊಬೈಲ್ ಫೋನ್ ಕೊಡುವುದು ಸ್ವಯಂ ರಕ್ಷಣೆಗೆ ಪಿಸ್ತೂಲನ್ನು ನೀಡಿ ಅದನ್ನು ಕ್ರಿಮಿನಲ್ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಂತಾಗುತ್ತದೆ ಎಂದು ಸಚಿವರು ಹೇಳಿದರು.

ಅಲ್ಲದೆ, ನಾನ್ ವೆಚ್‌ಗಳ ಸೇವನೆ ದೇಹವನ್ನು ಉದ್ರೇಕಿಸುತ್ತದೆ. ಇದು ಅತ್ಯಾಚಾರಕ್ಕೆ ಪ್ರಯತ್ನಿಸುವಂತೆ ಮಾಡುತ್ತದೆ. ಹೀಗಾಗಿ ಸಸ್ಯಹಾರಿ ಸೇವನೆ ಮಾಡುವುದು ಸೂಕ್ತ. ಏಕೆಂದರೆ ಸಸ್ಯಹಾರಿ ದೇಹ ಹಾಗೂ ಮನಸ್ಸನ್ನು ಉದ್ರೇಕಿಸದೆ, ಶಾಂತಿಯುತ ಹಾಗೂ ಆರೋಗ್ಯಕರವಾಗಿ ಇಡುತ್ತದೆ ಎಂದರು.

ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್‌ ಫೋನ್‌ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಶಾಸಕಿ ಶಕುಂತಲಾ ಶೆಟ್ಟಿ ಅವರ ಅಧ್ಯಕ್ಷತೆಯ ವಿಧಾನಮಂಡಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement