ಸಿವಿಲ್ ಸರ್ವೀಸ್ ಪೂರ್ವಸಿದ್ಧತಾ ಪರೀಕ್ಷೆ ಮುಂದೂಡಲು ಸರ್ಕಾರ ಒತ್ತಾಯ
ಸಿವಿಲ್ ಸರ್ವೀಸ್ ಪೂರ್ವಸಿದ್ಧತಾ ಪರೀಕ್ಷೆಯನ್ನು ಮುಂದೂಡಬೇಕೆಂದು ಸರ್ಕಾರ ಕೇಂದ್ರ ಲೋಕ ಸೇವಾ ಆಯೋಗ...
ನವದೆಹಲಿ: ಸಿವಿಲ್ ಸರ್ವೀಸ್ ಪೂರ್ವಸಿದ್ಧತಾ ಪರೀಕ್ಷೆಯನ್ನು ಮುಂದೂಡಬೇಕೆಂದು ಸರ್ಕಾರ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ)ಕ್ಕೆ ಮನವಿ ಮಾಡಿದೆ. ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವವರೆಗೆ ಈ ಪರೀಕ್ಷೆಯನ್ನು ಮುಂದೂಡಬೇಕು ಎಂದು ಸರ್ಕಾರ ಹೇಳಿದೆ.
ಯುಪಿಎಸ್ಸಿ ಪರೀಕ್ಷೆಯ ಎರಡನೇ ಪೇಪರ್ ಆಗಿರುವ ಭಾಷಾ ತಿಳುವಳಿಕೆ ಕೌಶಲ ಪೇಪರ್ನಲ್ಲಿ ಎಲ್ಲ ಪ್ರಶ್ನೆಗಳನ್ನು ಇಂಗ್ಲಿಷ್ನಲ್ಲಿ ಕೊಡಲಾಗಿದ್ದು, ಪ್ರಶ್ನೆಯ ಕೆಳಗೆ ಹಿಂದಿಯಲ್ಲಿ ಅನುವಾದವನ್ನು ಕೊಡಬೇಕು. ಇಲ್ಲವಾದಲ್ಲಿ ಹಿಂದಿ ಭಾಷೆಯನ್ನಾಡುವ ರಾಜ್ಯದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನೆದುರಿಸುವುದು ಕಷ್ಟವಾಗಲಿದೆ .
ಆದ್ದರಿಂದ ಪ್ರಸ್ತುತ ಪರೀಕ್ಷೆಯ ಎರಡನೇ ಪೇಪರ್ನ್ನು ಬದಲಾಯಿಸಬೇಕು ಎಂದು ವಿದ್ಯಾರ್ಥಿಗಳು ಯುಪಿಎಸ್ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಪರೀಕ್ಷೆ ಮುಂದೂಡುವಂತೆ ಸರ್ಕಾರ ಒತ್ತಾಯಿಸಿದೆ.