ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಕಾಶವಾಣಿ ಸುದ್ದಿಯನ್ನು ಪ್ರಸಾರ ಮಾಡಲು ಖಾಸಗಿ ಎಫ್‌ಎಂಗಳಿಗೆ ಅನುಮತಿ

ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಪ್ರಸಾರ ಮಾಡುವ ಪ್ರಧಾನ ಸುದ್ದಿ ಮುಖ್ಯಾಂಶಗಳನ್ನು ಖಾಸಗಿ ಎಫ್‌ಎಂ...

Rashmi Kasaragodu
Updated On : 16 Jul 2014, 4:08 am

ನವದೆಹಲಿ: ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಪ್ರಸಾರ ಮಾಡುವ ಪ್ರಧಾನ ಸುದ್ದಿ ಮುಖ್ಯಾಂಶಗಳನ್ನು ಖಾಸಗಿ ಎಫ್‌ಎಂ ಚಾನೆಲ್‌ಗಳು ಪ್ರಸಾರ ಮಾಡಬಹುದು. ಇದಕ್ಕಾಗಿ ಪ್ರಸಾರ ವಿಷಯಕ್ಕೆ ಸಂಬಂಧಿಸಿದ ನೀತಿಗಳಲ್ಲಿ ತಿದ್ದುಪಡಿ ತರಲಾಗುವುದು ಎಂದು ಲೋಕಸಭೆಯಲ್ಲಿ ತಿಳಿಸಲಾಗಿದೆ.

ಈಗಿರುವ ಎಫ್‌ಎಂ ರೇಡಿಯೋ ನೀತಿ ಸಂಹಿತೆಯ ಪ್ರಕಾರ ಖಾಸಗಿ ಎಫ್‌ಎಂ ಚಾನೆಲ್‌ಗಳು ಸುದ್ದಿ ಪ್ರಸಾರ ಮಾಡುವಂತಿಲ್ಲ. ಈ ಬಗ್ಗೆ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಮಾಹಿತಿ ಹಾಗು ಪ್ರಸಾರಣ ಸಚಿವ ಪ್ರಕಾಶ್ ಜವಡೇಕರ್, ಎಫ್‌ಎಂ ರೇಡಿಯೋ 3ನೇ ಹಂತ ನೀತಿ ಸಂಹಿತೆಯ ಪ್ರಕಾರ ಆಕಾಶವಾಣಿ ಪ್ರಸಾರ ಮಾಡುವ ಸುದ್ದಿಗಳನ್ನು ಹಾಗೆಯೇ ಪ್ರಸಾರಮಾಡುವ ಹಕ್ಕುಗಳನ್ನು ಎಫ್‌ಎಂಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

ಮಾತ್ರವಲ್ಲದೆ ಖಾಸಗಿ ಎಫ್‌ಎಂ ಚಾನೆಲ್‌ನ ನಿರೂಪಕರು ಆಕಾಶವಾಣಿಯ ಸುದ್ದಿಯನ್ನು ಹಾಗೆಯೇ ಪ್ರಸ್ತುತ ಪಡಿಸಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement