'ಕೇಳಿ ಕಥೆಯ' ಆಡಿಯೋ ಪುಸ್ತಕದ ವೆಬ್ಸೈಟ್ಗೆ ಚಾಲನೆ
ಕನ್ನಡ ಸಣ್ಣ ಕಥೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ 'ಕೇಳಿ ಕಥೆಯ' ಆಡಿಯೋ ಪುಸ್ತಕ ತನ್ನ ವೆಬ್ಸೈಟ್ ...
ಬೆಂಗಳೂರು: ಕನ್ನಡ ಸಣ್ಣ ಕಥೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ 'ಕೇಳಿ ಕಥೆಯ' ಆಡಿಯೋ ಪುಸ್ತಕ ತನ್ನ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಚಾನಲ್ಗಳನ್ನು ಆರಂಭಿಸಿದೆ.
ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ನಟ, ನಿರ್ದೇಶಕ ನಾಗಾಭರಣ ಹಾಗು ಗಾಯಕಿ ಪಲ್ಲವಿ ಅರುಣ್ ಈ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ನಾಗಾಭರಣ ಅವರು, 'ಕೇಳಿ ಕಥೆಯ' ಆಡಿಯೋ ಪುಸ್ತಕವು ಕನ್ನಡದ ಸಣ್ಣ ಕಥೆಗಳನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಈ ಆಡಿಯೋ ಪುಸ್ತಕವು ಕನ್ನಡದ ಪ್ರಮುಖ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ, ಜಯಂತ್ ಕಾಯ್ಕಿಣಿ, ರವಿ ಬೆಳಗೆರೆ, ನಾ.ಡಿಸೋಜ, ವಸುಧೇಂದ್ರ ಹಾಗು ವಿಕ್ರಮ್ ಹತ್ವಾರ್ ಇವರ ಸಣ್ಣ ಕಥೆಗಳನ್ನು ಒಳಗೊಂಡಿದೆ.