'ನಾಪತ್ತೆ ಪೋಸ್ಟರ್' ಮೂಲಕ ಅಣಕಕ್ಕೆ ತುತ್ತಾದ ಕೇಜ್ರಿವಾಲ್
ಕೇಜ್ರಿವಾಲ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಗಳು ದೆಹಲಿಯಲ್ಲಿ ಕಾಣಿಸಿಕೊಂಡಿದ್ದು ಈ ಮೂಲಕ....
ನವದೆಹಲಿ: ಕೇಜ್ರಿವಾಲ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಗಳು ದೆಹಲಿಯಲ್ಲಿ ಕಾಣಿಸಿಕೊಂಡಿದ್ದು ಈ ಮೂಲಕ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರ ಅಣಕಕ್ಕೆ ತುತ್ತಾಗಿದ್ದಾರೆ.
ನವದೆಹಲಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘಟನೆ (ಆರ್ಡಬ್ಲ್ಯೂ ಎ)ಯೊಂದು ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಗಳನ್ನು ಅಂಟಿಸಿ ಅಣಕ ಮಾಡಿದೆ.
ಪ್ರಸ್ತುತ ಪೋಸ್ಟರ್ನಲ್ಲಿ ಅರವಿಂದ್ ಕೇಜ್ರಿವಾಲ್ರ ಉದ್ಯೋಗ-ಪ್ರತಿಭಟನೆ ಮತ್ತು ಸುಳ್ಳು ಹೇಳುವುದು ಎಂದು ಬರೆಯಲಾಗಿದೆ.
ಮೇಲೆ ಹೇಳಿರುವ ವ್ಯಕ್ತಿಯನ್ನು ಯಾರಾದರೂ ಹುಡುಕಿಕೊಡಿ ಎಂದೂ ಬರೆಯಲಾಗಿದ್ದು, ಇದು ಕೇಜ್ರಿವಾಲ್ ದೆಹಲಿಯ ಜನರನ್ನು ಕಡೆಗಣಿಸಿದ್ದಕ್ಕೆ ಜನರು ಮಾಡಿದ ಅಣಕ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದು 49 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಕೇಜ್ರಿವಾಲ್ ತನ್ನ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ನಾಯಕತ್ವದ ವೈಫಲ್ಯದಿಂದ ಸಿಎಂ ಪಟ್ಟ ತೊರೆದಿದ್ದರು.