'ರೇಪಿಸ್ಟ್ ಗಳನ್ನು ಗುಂಡಿಕ್ಕಿ ಕೊಲ್ಲಬೇಕು': ರಮೇಶ್ ಕುಮಾರ್
ಚಲ್ಲಿಸುವ ಕಾರಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಪ್ರಕರಣ ಬುಧವಾರ ವಿಧಾಸಭೆಯಲ್ಲೂ ...
ಬೆಂಗಳೂರು: ಚಲ್ಲಿಸುವ ಕಾರಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಪ್ರಕರಣ ಬುಧವಾರ ವಿಧಾಸಭೆಯಲ್ಲೂ ಪ್ರತಿಧ್ವನಿಸಿತು.
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಆರ್.ಅಶೋಕ್ ಅವರು, ಯುವತಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದ ಚರ್ಚೆಗೆ ಅವಕಾಶ ನೀಡಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು. ಆದರೆ ಇದಕ್ಕೆ ಸ್ಪೀಕರ್ ಸಮ್ಮತಿ ನೀಡದೆ, ಎಲ್ಲಾ ಸರ್ಕಾರಗಳಲ್ಲೂ ಇಂತಹ ಪ್ರಕರಣಗಳು ನಡೆಯುತ್ತವೆ ಎಂದರು.
ಅಶೋಕ್ ಮಾತಿಗೆ ಧ್ವನಿಗೂಡಿಸಿದ ಶಾಸಕರು, ಕಾರಲ್ಲೇ ಯುವತಿ ಮೇಲೆ ಅತ್ಯಾಚಾರ ಎಸಗಿದ ಕೃತ್ಯವನ್ನು ಪಕ್ಷಬೇಧ ಮರೆತು ಖಂಡಿಸಿದರು. ಈ ವೇಳೆ ಮಾತನಾಡಿದ ಕೋಲಾರ ಜಿಲ್ಲೆ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಅವರು, 'ರೇಪಿಸ್ಟ್ಗಳನ್ನು ಪತ್ತೆ ಮಾಡಿ ಗುಂಡಿಕ್ಕಿ ಕೊಲ್ಲಬೇಕು'. ಹೀಗಾದಲ್ಲಿ ಮಾತ್ರ ನಮ್ಮ ಹೆಣ್ಣುಮಕ್ಕಳು ನೆಮ್ಮದಿಯಿಂದ ಇರಲು ಸಾಧ್ಯ ಎಂದರು.
ಬಂದಿತ ಆರೋಪಿ ನಾಸೀರ್ ಈ ಮುಂಚೆಯೂ ಅತ್ಯಾಚಾರ ಎಸಗಿದ್ದ
ಚಲಿಸುವ ಕಾರಲ್ಲೇ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ನಾಸಿರ್ ಹೈದರ್ನ ಮತ್ತಷ್ಟು ಪ್ರಕರಣಗಳು ಈಗ ಬೆಳಕಿಗೆ ಬಂದಿದ್ದು, ಆರೋಪಿ ಈ ಹಿಂದೆ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ ಸಂಗತಿ ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ಇತನ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಕಾರು ಕಳವು ಪ್ರಕರಣ ದಾಖಲಾಗಿದೆ.
ವಿವೇಕಾನಂದನಗರದ ನಿವಾಸಿಯಾಗಿರುವ ನಾಸಿರ್ ಹೈದರ್ ಬಿಎಸ್ಪಿ ನಾಯಕ ಬಹದ್ದೂರ್ ಎಂಬುವವರ ಪುತ್ರ. ನಾಸಿರ್ ತಂದೆ ಬಹದ್ದೂರ್ ಬಿಎಸ್ಪಿಯಿಂದ ಹಲವು ಬಾರಿ ಲೋಕಸಭೆ ಮತ್ತು ವಿಧಾಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.
ಇನ್ನು ತಲೆಮರೆಸಿಕೊಂಡಿರುವ ಪ್ರಕರಣದ ಇತರೆ ಆರೋಪಿಗಳಾದ ಇಮ್ತಿಯಾಜ್, ಮಹ್ಮದ ಅಲಿ, ವಸೀಂ ಹಾಗೂ ಅಲ್ತಾಫ್ನನ್ನು ಬಂಧಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.