ಪೊಲೀಸರ ಮುಂದೆಯೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದರು!
ಬಿಹಾರದ ಜೆಹನಾಬಾದ್ ಜಿಲ್ಲೆಯಲ್ಲಿ ಮಧ್ಯ ವಯಸ್ಸಿನ ಮಹಿಳೆ..
ಪಟನಾ: ಬಿಹಾರದ ಜೆಹನಾಬಾದ್ ಜಿಲ್ಲೆಯಲ್ಲಿ ಮಧ್ಯ ವಯಸ್ಸಿನ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ವರದಿಯಾಗಿದೆ.
ಬುಧವಾರ ರಾತ್ರಿ 1.30ಕ್ಕೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಸಂಗೀತಾ ದೇವಿ ಎಂಬವರಿಗೆ ಈ ರೀತಿ ಥಳಿಸಿದ್ದಾರೆ,
ಸಂಗೀತಾ ದೇವಿ ವಾಸವಾಗಿರುವ ಮನೆ ಖಾಲಿ ಮಾಡಬೇಕೆಂದು ಒತ್ತಾಯಿಸಿ ದುಷ್ಕರ್ಮಿಗಳು ಹಲ್ಲಿ ನಡೆಸಿದ್ದಾರೆ. ಅಪರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆ ಆಕ್ರಮಿಸಿ, ನೆರೆಹೊರೆಯವರ ಮುಂದೆಯೇ ಆಕೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ.
ಘಟನೆ ನಡೆಯುವಾಗ ಅಲ್ಲಿಯೇ ಪೊಲೀಸರು ಹಾಜರಿದ್ದರೂ ಯಾರೊಬ್ಬರಿಗೂ ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂಬದು ನಾಚಿಕೆಗೇಡಿನ ಸಂಗತಿ.
ಆದಾಗ್ಯೂ, ಮಹಿಳೆ ಅಪಹರಣ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾರೆ ಎಂದು ಆಕ್ರಮಣಕಾರರು ದೂರಿದ್ದಾರೆ.
ತೀವ್ರ ಗಾಯಗೊಂಡಿರುವ ಮಹಿಳೆಯನ್ನು ಬಿಹಾರ್ ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಂಜಿ ಆದೇಶಿಸಿದ್ದಾರೆ.