6ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತೋತ್ಸವ
ಬೆಂಗಳೂರು : 6ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತೋತ್ಸವ ಸೆಪ್ಟಂಬರ್ 17 ರಂದು ನಡೆಯಲ್ಲಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಆರ್. ಶ್ರೀನಿವಾಸ್ ವಿಶ್ವಕರ್ಮ, ಸೆಪ್ಟಂಬರ್ 17 ರಂದು
ವಿಶ್ವಕರ್ಮ ಜಯಂತಿಗೆ ಸರ್ಕಾರಿ ರಜೆ ಘೋಷಿಸಬೇಕು ಎಂದು ಅಗ್ರಹಿಸಿ ಜುಲೈ 20 ರಂದು ಬೆಳಿಗ್ಗೆ 11.30ಕ್ಕೆ ಮಲ್ಲೇಶರಂ ಮೈದಾನದಿಂದ ಫ್ರೀಡಂ ಪಾರ್ಕ್ವರೆಗೆ ಪಾದಯಾತ್ರೆ ನಡೆಸಲಾಗುವುದು ಮತ್ತು ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸರ್ಕಾರ ವಿಶ್ವಕರ್ಮ ನಿಗಮಕ್ಕೆ 50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ, ವಿಶ್ವಕರ್ಮ ಸಮಾಜದ ಪಂಚ ಕಸುಬುಗಳಿಗೆ ಒದಗಿಸಬೇಕು ಎಂದು ಶ್ರೀನಿವಾಸ್ ವಿಶ್ವಕರ್ಮ ಅವರು ಒತ್ತಾಯಿಸಿದರು.