ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದಾಳಿಗೊಳಗಾದ ಮಲೇಷ್ಯಾ ವಿಮಾನ ಮಾರ್ಗದಲ್ಲೇ ಮೋದಿ ಪ್ರಯಾಣ, ತಪ್ಪಿದ ಮತ್ತೊಂದು ದುರಂತ

ನಿನ್ನೆ ಗಲಭೆ ಪೀಡಿತ ಪೂರ್ವ ಉಕ್ರೇನ್ ಮೇಲೆ ಸಾಗುತ್ತಿದ್ದ ಮಲೇಷ್ಯಾ ವಿಮಾನವನ್ನು ಉಕ್ರೇನ್ ಉಗ್ರರು ಕ್ಷಿಪಣಿ ಮೂಲಕ..

Lingaraj Badiger
Updated On : 18 Jul 2014, 12:44 pm

ನವದೆಹಲಿ: ನಿನ್ನೆ ಗಲಭೆ ಪೀಡಿತ ಪೂರ್ವ ಉಕ್ರೇನ್ ಮೇಲೆ ಸಾಗುತ್ತಿದ್ದ ಮಲೇಷ್ಯಾ ವಿಮಾನವನ್ನು ಉಕ್ರೇನ್ ಉಗ್ರರು ಕ್ಷಿಪಣಿ ಮೂಲಕ ಹೊಡೆದು ಉರುಳಿಸಿದ ಸಮಯದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಅದೇ ಪ್ರದೇಶದಲ್ಲಿ ಸಂಚರಿಸಿದೆ. ಅದೃಷ್ಟವಶಾತ್ ನರೇಂದ್ರ ಮೋದಿ ಅವರು ಸುರಕ್ಷಿತವಾಗಿ ತವರಿಗೆ ಮರಳಿದ್ದು, ಮತ್ತೊಂದು ಘೋರ ದುರಂತ ತಪ್ಪಿದಂತಾಗಿದೆ.

ಭಾರತದ ಪ್ರಮುಖ ಆಂಗ್ಲ ದಿನ ಪತ್ರಿಕೆಯೊಂದರ ವರದಿಯ ಪ್ರಕಾರ, ಮಲೇಷ್ಯಾ ವಿಮಾನ ದುರಂತ ನಡೆದ ಕೆಲವೇ ಕ್ಷಣಗಳಲ್ಲೇ ಮೋದಿ ಅವರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಸಹ ಅದೇ ಮಾರ್ಗದ ಮೂಲಕ ಭಾರತಕ್ಕೆ ಆಗಮಿಸಿದೆ. ಮೋದಿ ಅವರು ತಮ್ಮ ಬ್ರೆಜಿಲ್ ಪ್ರವಾಸ ಮುಗಿಸಿಕೊಂಡು ಇಂದು ದೆಹಲಿಗೆ ವಾಪಸ್ ಆಗಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಗಡಿ ಭಾಗದಲ್ಲಿ ಮಲೇಷ್ಯಾದ ವಿಮಾನ ಪತನಗೊಂಡು 295 ಮಂದಿ ಅಸುನೀಗಿದ್ದಾರೆ. ಈ ಪೈಕಿ 280 ಪ್ರಯಾಣಿಕರು ಮತ್ತು 15 ಮಂದಿ ಸಿಬ್ಬಂದಿ ಇದ್ದರು.  ಅಪಘಾತಕ್ಕೆ ಈಡಾದ ವಿಮಾನ ಆಮ್‌ಸ್ಟರ್‌ಡ್ಯಾಮ್‌ನಿಂದ ಕೌಲಾಲಂಪುರಕ್ಕೆ ತೆರಳುತ್ತಿತ್ತು. ಉಗ್ರರು ಕ್ಷಿಪಣಿ ಉಡಾಯಿಸಿ ವಿಮಾನ ಪತನಗೊಳಿಸಿದ್ದಾರೆ. ಏಪ್ರಿಲ್‌ನಲ್ಲಿ 250 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿರುವ ಬೆನ್ನಲ್ಲೇ ದುರಂತ ನಡೆದಿದೆ.

ರಷ್ಯಾ ಮತ್ತು ಉಕ್ರೇನ್ ಗಡಿ ಭಾಗದಿಂದ 50 ಕಿಮೀ ದೂರದಲ್ಲಿ ಈ ದುರಂತ ಸಂಭವಿಸಿದೆ. ಸುಮಾರು 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಉಗ್ರರು ಭುವಿಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಯಿಂದ ಉಡಾಯಿಸಿದ್ದಾರೆ. ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 8.45ಕ್ಕೆ ಈ ದುರಂತ ಸಂಭವಿಸಿದೆ.

ರಷ್ಯಾ, ಉಕ್ರೇನ್ ಆಗಸದಲ್ಲಿ ಭಾರತದ ವಿಮಾನ ಹಾರಾಟ ಸ್ಥಗಿತ
ರಷ್ಯಾ ಹಾಗೂ ಉಕ್ರೇನ್ ಗಡಿಯ ಮೇಲೆ ಏರ್ ಇಂಡಿಯಾ ವಿಮಾನ ಹಾರಾಟವನ್ನು ನಿಲ್ಲಿಸಲಾಗಿದೆ. ಅಲ್ಲದೆ ಭಾರತ, ಫ್ರಾನ್ಸ್ ಸೇರಿದಂತೆ ಇತೆರೆ ಅನೇಕ ರಾಷ್ಟ್ರಗಳು ವಿಮಾನ ಹಾರಾಟ ನಡೆಸುವುದಿಲ್ಲ ಎಂದು ಹೇಳಿವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement