ನಕ್ಸಲ್ ನಾಯಕ ಸಬ್ಯಸಾಚಿ ಪಾಂಡಾ ಬಂಧನ
ಒಡಿಶಾದ ಮೋಸ್ಟ್ ವಾಂಟೆಡ್ ನಕ್ಸಲರ ಪ್ರಮುಖ ನಾಯಕ ಸಬ್ಯಸಾಚಿ ...
ಭುವನೇಶ್ವರ: ಒಡಿಶಾದ ಮೋಸ್ಟ್ ವಾಂಟೆಡ್ ನಕ್ಸಲರ ಪ್ರಮುಖ ನಾಯಕ ಸಬ್ಯಸಾಚಿ ಪಾಂಡಾನನ್ನು ಒಡಿಶಾ ಪೊಲೀಸರು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.
ಮೂಲಗಳ ಪ್ರಕಾರ, ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಪಾಂಡಾನನ್ನು ಪೊಲೀಸರು ಬಂಧಿಸಿದ್ದಾರೆ.
ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ಪೊಲೀಸರು ಗಂಜಮ್ ಜಿಲ್ಲೆಯಲ್ಲಿ ಅಡಗಿ ಕುಳಿತಿದ್ದ ಪಾಂಡಾನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಸಂಜೀವ್ ಮಾರಿಕ್ ಅವರು ತಿಳಿಸಿದ್ದಾರೆ.
50ಕ್ಕು ಹೆಚ್ಚು ಪ್ರಕರಣಗಳಲ್ಲಿ ಒಡಿಶಾ ಪೊಲೀಸರಿಗೆ ಬೇಕಾಗಿದ್ದ ಪಾಂಡಾ, ನಕ್ಸಲ್ ಸಂಘಟನೆಯ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೆ 2012ರಲ್ಲಿ ಇಬ್ಬರು ಇಟಲಿ ನಾಗಕರಿಕರನ್ನು ಅಪಹರಣ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ.