ಹರ್ಯಾಣಕ್ಕೆ ಪ್ರತ್ಯೇಕ ಗುರುದ್ವಾರ ಸಮಿತಿ: ಅಕಾಲಿದಳ ಪ್ರತಿಭಟನೆ
ಹರ್ಯಾಣ ರಾಜ್ಯಕ್ಕೆ ಪ್ರತ್ಯೇಕ ಗುರುದ್ವಾರ ಸಮಿತಿ ರೂಪಿಸುವ..
ಪಂಜಾಬ್: ಹರ್ಯಾಣ ರಾಜ್ಯಕ್ಕೆ ಪ್ರತ್ಯೇಕ ಗುರುದ್ವಾರ ಸಮಿತಿ ರೂಪಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ದೆಹಲಿ ಅಕಾಲಿದಳ ಯೂನಿಟ್ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.
ಭಾರೀ ಮಳೆಯಲ್ಲಿಯೂ ಪ್ರತಿಭಟನೆ ನಿರತರಾದ ಅಕಾಲಿದಳದ ಸದಸ್ಯರು ಕಪ್ಪು ಧ್ವಜ ಹಿಡಿದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹರ್ಯಾಣದ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ ವಿರುದ್ಧ ಘೋಷಣೆ ಕೂಗಿದ್ದಾರೆ.
ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರೂ ಬ್ಯಾರಿಕೇಡ್‌ಗಳನ್ನು ದೂಡಿ ಕಚೇರಿ ಆವರಣಕ್ಕೆ ಪ್ರವೇಶಿಸಿದ್ದು, ಅವರನ್ನು ಚದುರಿಸಲು ಜಲಫಿರಂಗಿ ಬಳಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹೂಡಾ ಸರ್ಕಾರ ಎರಡೂ ವೆಂಟಿಲೇಟರ್‌ನಲ್ಲಿ ಇರುವುದರಿಂದ ಸಿಖ್ಖರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಸೋನಿಯಾಗಾಂಧಿ ಅವರ ಕುಟುಂಬ ಸಿಖ್ ರಿಗೆ ಹಾನಿಯನ್ನುಂಟು ಮಾಡಿದ್ದೇ ಜಾಸ್ತಿ. ಸೋನಿಯಾ ಅವರ ಅತ್ತೆ ಸಿಖ್ ರಿಗೆ ಹಾನಿಯುಂಟು ಮಾಡಿದ್ದಕ್ಕೆ ಅವರಿಗೆ ಬೆಲೆ ತೆರಬೇಕಾಗಿ ಬಂತು. ಈಗ ಸೋನಿಯಾ ಅವರು ಅದೇ ದಾರಿಯನ್ನು ಅನುಸರಿಸುವುದು ಬೇಡ ಎಂದು ನಾವು ಎಚ್ಚರಿಕೆ ನೀಡುತ್ತೇವೆ ಎಂದು ಪ್ರತಿಭಟನಾ ನಿರತ ದೆಹಲಿ ಸಿಖ್ ಗುರುದ್ವಾರಾ ಮ್ಯಾನೇಜ್‌ಮೆಂಟ್ ಸಮಿತಿ ಅಧ್ಯಕ್ಷ ಜತೆಂದರ್ ಮಂಜೀತ್ ಸಿಂಗ್ ಜಿಕೆ ಹೇಳಿದ್ದಾರೆ.