ದೆಹಲಿ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ರು.2,481 ಕೋಟಿ ಮೀಸಲು
2014-25ರ ದೆಹಲಿ ಬಜೆಟ್ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ರು. 2, 482..
ನವದೆಹಲಿ: 2014-25ರ ದೆಹಲಿ ಬಜೆಟ್ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ರು. 2, 482 ಕೋಟಿ ಅನುದಾನ ನೀಡಿದ್ದಾರೆ. ಕಳೆದ ವರ್ಷ ಶೀಲಾ ದೀಕ್ಷಿತ್ ಅವರು ಈ ಕ್ಷೇತ್ರಕ್ಕಾಗಿ ರು.1,901 ಕೋಟಿ ರು ಅನುದಾನ ನೀಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು ಮೊತ್ತ ನೀಡಲಾಗಿದೆ.
ಪ್ರತೀ ವರ್ಷ ದೆಹಲಿ ಸರ್ಕಾರಿ ಶಾಲೆಗಳಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿಯಾಗುತ್ತಿದ್ದು, ಇನ್ನೂ 500 ಶಾಲೆಗಳ ಅಗತ್ಯವಿದೆ.
ಶಿಕ್ಷಣದ ಹಕ್ಕು ಪ್ರಕಾರ ಪ್ರತಿಯೊಂದು ಮಗುವಿಗೂ ಸರಿಯಾದ ಶಿಕ್ಷಣ ಸಿಗಬೇಕು ಎಂಬುದನ್ನು ಮನದಟ್ಟು ಮಾಡಿಕೊಂಡೇ ಈ ಬಜೆಟ್ ತಯಾರಿಸಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಪ್ರಸ್ತುತ ಬಜೆಟ್ನಲ್ಲಿ ನೂತನ 20 ಶಾಲೆಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಇದರ ಖರ್ಚು ರು. 350 ಕೋಟಿ ಆಗಿದೆ. ಈಗಾಗಲೇ ರಾಜ್ಯದಲ್ಲಿ 380 ಸೀನಿಯರ್ ಸೆಕೆಂಡರಿ ಶಾಲೆಗಳಿದ್ದು, ರಾಜ್ಯದ ಇನ್ನಿತರ ಪ್ರದೇಶಗಳಲ್ಲಿಯೂ ಹೆಚ್ಚಿನ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಯೋಚಿಸಿದೆ.