ಇನ್ನು ಕಾರು ವಿಮೆ ನವೀಕರಣ 5 ವರ್ಷಗಳಿಗೊಮ್ಮೆ?
ಪ್ರತೀ ವರ್ಷ ಕಾರು ವಿಮೆಯನ್ನು ನವೀಕರಣಗೊಳಿಸುವುದು ಹೆಚ್ಚಿನವರಿಗೆ ತಲೆನೋವಿನ ಸಂಗತಿಯೇ....
ನವದೆಹಲಿ: ಪ್ರತೀ ವರ್ಷ ಕಾರು ವಿಮೆಯನ್ನು ನವೀಕರಣಗೊಳಿಸುವುದು ಹೆಚ್ಚಿನವರಿಗೆ ತಲೆನೋವಿನ ಸಂಗತಿಯೇ. ಹೀಗಿರುವಾಗ ನಾವೇ ನಿಮ್ಮ ವಿಮೆಯನ್ನು ನವೀಕರಿಸುತ್ತೇವೆ ಎಂದು ಕಾರು ಖರೀದಿಯ ವೇಳೆಗೆ ಕಾರು ಕಂಪನಿಗಳೇ ಗ್ರಾಹಕರಿಗೆ ಆಫರ್ ನೀಡುವುದೂ ಉಂಟು.
ಆದರೆ ಈಗ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇಂಗ್ಲೀಷ್ ದಿನಪತ್ರಿಕೆಯೊಂದರ ವರದಿಯ ಪ್ರಕಾರ ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲೆಪ್‌ಮೆಂಟ್ ಅಥಾರಿಟಿ (ಐಆರ್‌ಡಿಎ) 5 ವರ್ಷಗಳಿಗೊಮ್ಮೆ ಕಾರು ವಿಮೆ ನವೀಕರಣಗೊಳಿಸುವ ಸಂಹಿತೆಯನ್ನು ಜಾರಿ ಮಾಡಲು ಯೋಚನೆ ಮಾಡಿದೆ ಎಂದು ವರದಿ ಮಾಡಿದೆ.
ಈ ಸಂಹಿತೆ ಜಾರಿಯಾದರೆ, ಈ ಹಿಂದಿನ ವಿಮೆ ನೀತಿಗಳಿಗಿಂತ ಇದು ಅಗ್ಗವೆನಿಸಲಿದೆ. ಅದೇ ವೇಳೆ ಗ್ರಾಮಾಂತರ ಪ್ರದೇಶಗಳಲ್ಲಿ ವಿಮೆಯನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ದೀರ್ಘಕಾಲದ ವಿಮೆಯನ್ನು ನೀಡಲು ಐಆರ್‌ಡಿಎ ನಿರ್ಧರಿಸಿದೆ.