ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಎಪಿ ನಾಯಕ ಕುಮಾರ್ ವಿಶ್ವಾಸ್‌ಗೆ 5 ಕೋಟಿ ಆಫರ್?

ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ ಈಗ ಬಹುಬೇಡಿಕೆ ಸೆಲಿಬ್ರಿಟಿಯಾಗಿದ್ದಾರೆ...

Mainashree
Updated On : 22 Jul 2014, 4:10 am

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ ಈಗ ಬಹುಬೇಡಿಕೆ ಸೆಲಿಬ್ರಿಟಿಯಾಗಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸೋಲು ಕಂಡ ಎಎಪಿ ನಾಯಕ ಕುಮಾರ್ ವಿಶ್ವಾಸ್ ಬಹುಬೇಡಿಕೆ ಸೆಲಿಬ್ರಿಟಿ. ಕವಿಯಾಗಿದ್ದ ವಿಶ್ವಾಸ್ ರಾಜಕಾರಣಿಯಾದ ನಂತರ ಒಳ್ಳೆ ಆಫರ್ ಬಂದಂತಾಗಿದೆ.

ಟಿವಿ ಶೋ 'ಬಿಗ್‌ಬಾಸ್‌'ನಲ್ಲಿ ಪಾಲ್ಗೊಳ್ಳಲು ಕುಮಾರ್ ವಿಶ್ವಾಸ್‌ಗೆ ಎನ್ಡ್‌ಮೋಲ್ ನಿರ್ಮಾಣ ಸಂಸ್ಥೆ 5 ಕೋಟಿ ಆಫರ್ ನೀಡಿದೆ. ಈ ಸಂಬಂಧ ಮಾತನಾಡಿದ ಕುಮಾರ್ ವಿಶ್ವಾಸ್, ಸೆಪ್ಟೆಂಬರ್‌ನಲ್ಲಿ ಬರುವ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಎನ್ಡ್‌ಮೋಲ್ ಕಂಪನಿ ನನ್ನ ಬಳಿ ಪ್ರಸ್ತಾಪಿಸಿದೆ ಎಂದು ಹೇಳಿದ್ದಾರೆ.

ಆದರೆ ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಲು ವಿಶ್ವಾಸ್ ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ ಕಂಪನಿ 5 ಕೋಟಿ ಆಫರ್ ನೀಡಿದೆ ಎಂದು ತಿಳಿದು ಬಂದಿದೆ.

ಚುನಾವಣೆಯಲ್ಲಿ ಸೋಲು ಕಂಡರೂ, ಕುಮಾರ್ ವಿಶ್ವಾಸ್ ಬಹುಬೇಡಿಕೆ ಸೆಲಿಬ್ರಿಟಿಯಾಗಿದ್ದಾರೆ ಎಂದು ಈ ಆಫರ್‌ನಿಂದ ತಿಳಿಯುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement