ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಮ್ಮ ಒಬ್ಬ ಸೈನಿಕ ಸತ್ತರೆ, ಪಾಕ್‌ನ 10 ಸೈನಿಕರನ್ನು ಕೊಲ್ಲಿರಿ: ಶಿವಸೇನಾ

ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ದಾಳಿ ಮಾಡುತ್ತಿರುವ ಪಾಕಿಸ್ತಾನದ...

Mainashree
Updated On : 22 Jul 2014, 5:18 am

ನವದೆಹಲಿ: ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ದಾಳಿ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಶಿವಸೇನಾ ಕಿಡಿಕಾರಿದ್ದು, ಓರ್ವ ಭಾರತೀಯ ಸೈನಿಕರನ್ನು ಅವರು ಹತ್ಯೆಗೈದರೆ, ಪಾಕ್‌ನ 10 ಸೈನಿಕರನ್ನು ಭಾರತೀಯ ಸೈನಿಕರು ಕೊಲ್ಲಬೇಕು ಎಂದು ಹೇಳಿದೆ.

ಗಡಿ ನಿಯಮ ಉಲ್ಲಂಘನೆ ಸಂಬಂಧ ಪಾಕ್ ಜೊತೆ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದು, ಈ ಸಂಬಂಧ ಪ್ರತಿಕ್ರಯಿಸಿರುವ ಶಿವಸೇನಾ, ಪಾಕ್‌ನೊಂದಿಗೆ ಯಾವ ಮಾತುಕತೆ ಬೇಡ, ಅವರು ನಮ್ಮ ಒಬ್ಬ ಸೈನಿಕನನ್ನು ಕೊಂದರೆ, ನಾವು 10 ಪಾಕ್ ಸೈನಿಕರನ್ನು ಕೊಲ್ಲಬೇಕು. ಇದೇ ಅವರಿಗೆ ನೀಡುವ ಪ್ರತ್ಯುತ್ತರ ಎಂದು ಹೇಳಿದ್ದಾರೆ.

ಶಿವಸೇನಾ ವಕ್ತಾರ ಸಂಜಯ್ ರಾವತ್ ಮಾತನಾಡಿ, ಮಾತಲ್ಲಿ ಹೇಳಿದರೆ ಪಾಕ್ ಸರ್ಕಾರಕ್ಕೆ ಅರ್ಥವಾಗುವುದಿಲ್ಲ. ಸರಿಯಾದ ತಿರುಗೇಟು ನೀಡಿದರೆ ಮಾತ್ರ ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತದ ಮೇಲೆ ಪಾಕ್ ದಾಳಿ ಮಾಡುತ್ತಿದ್ದು, ಮೇಲ್ನೋಟಕ್ಕೆ ಮಾತ್ರ ಉಭಯ ದೇಶಗಳ ಸಂಬಂಧ ಗಟ್ಟಿ ಮಾಡಿಕೊಳ್ಳುವ ನಾಟಕವಾಡುತ್ತಿದೆ. ಇಂತಹ ನಡವಳಿಕೆಗೆ ತಕ್ಕ ಪಾಠ ಕಲಿಸಬೇಕು. ಏಟಿಗೆ ಎದುರೇಟು ಎಂಬ ನಿಯಮವನ್ನು ನೂತನ ಕೇಂದ್ರ ಸರ್ಕಾರ ಪಾಲಿಸಬೇಕು. ಆಗ ಮಾತ್ರ ಪಾಕ್ ಸೈನಿಕರ ಅಟ್ಟಹಾಸವನ್ನು ಹತ್ತಿಕ್ಕಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement