ರೇಪ್ ಕೇಸ್ ಬಿಟ್ರೆ ಬೇರೆ ಸುದ್ದಿ ಇಲ್ವಾ: ಮಾದ್ಯಮಗಳ ಮೇಲೆ ಸಿಎಂ ಸಿಟ್ಟು
ಶಾಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಪ್ರಶ್ನಿಸಲು ಮುಂದಾದ...
ಬೆಂಗಳೂರು: ಶಾಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಪ್ರಶ್ನಿಸಲು ಮುಂದಾದ ಮಾದ್ಯಮಗಳ ವರದಿಗಾರರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ರೇಪ್ ಪ್ರಕರಣ ಕುರಿತು ಸರ್ಕಾರದ ಕ್ರಮದ ಬಗ್ಗೆ ವರದಿಗಾರರು ಪ್ರಶ್ನಿಸಲು ಮುಂದಾದಾಗ, ಕುಪಿತಗೊಂಡ ಸಿಎಂ, 'ರೇಪ್ ಕೇಸ್ ಬಿಟ್ರೆ ಬೇರೆ ಸುದ್ದಿ ಇಲ್ವಾ ನಿಮಗೆ' ಎಂದು ಗುಡುಗಿದ್ದಾರೆ.
ರೇಪ್ ಕೇಸ್ ಬಿಟ್ರೆ ನಿಮಗೆ ಬೇರೆ ಸುದ್ದಿ ಇಲ್ವಾ ಇದೊಂದೇ ಸುದ್ದಿನಾ ಎಂದು ಕಿಡಿಕಾರಿದ ಸಿದ್ದರಾಮಯ್ಯ ತದ ನಂತರ, ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.