ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಂಬೈ ಐಐಟಿ ಕ್ಯಾಂಪಸ್‌ಗೆ ನುಗ್ಗಿದ ಚಿರತೆ!

ಮುಂಬೈನಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕ್ಯಾಂಪಸ್‌ನೊಳಗೆ..

ಸಾಂದರ್ಭಿಕ ಚಿತ್ರ
Rashmi Kasaragodu
Updated On : 23 Jul 2014, 8:12 am

ಮುಂಬೈ: ಮುಂಬೈನಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕ್ಯಾಂಪಸ್‌ನೊಳಗೆ ಬುಧವಾರ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದೆ.

ಐಐಟಿಯಲ್ಲಿನ ಲೋಹಶಾಸ್ತ್ರ ವಿಭಾಗದ ವರ್ಕ್‌ಶಾಪ್ ನಲ್ಲಿ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ. ಕೂಡಲೇ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಚಿರತೆ ಇನ್ನೂ ಕ್ಯಾಂಪಸ್‌ನ ಒಳಗಡೆ ಇದೆಯೇ ಎಂದು ಅರಣ್ಯ ಇಲಾಖಾಧಿಕಾರಿಗಳು ಪರಿಶೋಧಿಸುತ್ತಿದ್ದಾರೆ.

ಕ್ಯಾಂಪಸ್‌ನ ಒಳಗೆ ಚಿರತೆ ಪ್ರತ್ಯಕ್ಷವಾಗಿದೆ ಎಂದು ಅರಿತಕೂಡಲೇ ನಾವು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದೆವು ಎಂದು ಐಐಟಿಯ ಪಬ್ಲಿಕ್ ರಿಲೇಷನ್‌ಶಿಪ್ ಅಧಿಕಾರಿ ರಶ್ಮಿ ಉದಯಕುಮಾರ್ ಹೇಳಿದ್ದಾರೆ.

ಚಿರತೆ ಕ್ಯಾಂಪಸ್‌ನೊಳಗೆ ನುಗ್ಗಿರುವ ಹಿನ್ನಲೆಯಲ್ಲಿ  ಜನರಿಗೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಹೇಳಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement