ಬೆಂಗಳೂರು: ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸುವ ಸಲುವಾಗಿ ಬ್ರೆನ್ ಮತ್ತು ಚಾಂಪಿಯನ್ಸ್ ಗ್ರೂಪ್ ಸಂಸ್ಥೆಯು ಗೋ ಗ್ರೀನ್ ರನ್ ಎಂಬ ಕಾರ್ಯಕ್ರಮವನ್ನು ಇದೇ ಜುಲೈ 26 ರಂದು ಬೆಳಿಗ್ಗೆ 6.30ಕ್ಕೆ ಸರ್ಜಾಪುರದಲ್ಲಿ ಹಮ್ಮಿಕೊಂಡಿದೆ.
ಸರ್ಜಾಪುರದಿಂದ ಪ್ರಾರಂಭಗೊಳ್ಳುವ ಗೋ ಗ್ರೀನ್ ಓಟ ಸ್ಫರ್ಧೆಯಲ್ಲಿ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ಜುಲೈ 26ರ ಶನಿವಾರ ಬೆಳಿಗ್ಗೆ 6.30 ಕ್ಕೆ ಓಟ ಪ್ರಾರಂಭಗೊಳ್ಳಲಿದೆ. ಓಟ ಸ್ಫರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Http://www.gogreenrun.com