ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಪ್ಪು ಹಣವನ್ನು ಶೀಘ್ರದಲ್ಲೇ ವಾಪಸ್ ತರ್ತೀವಿ: ಅರುಣ್ ಜೇಟ್ಲಿ

ವಿದೇಶದಲ್ಲಿರುವ ಕಪ್ಪು ಹಣವನ್ನು ಶೀಘ್ರದಲ್ಲೇ ವಾಪಸ್..

Rashmi Kasaragodu
Updated On : 25 Jul 2014, 7:38 am

ನವದೆಹಲಿ: ವಿದೇಶದಲ್ಲಿರುವ ಕಪ್ಪು ಹಣವನ್ನು ಶೀಘ್ರದಲ್ಲೇ ವಾಪಸ್ ತರಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕಪ್ಪು ಹಣವನ್ನು ವಾಪಾಸ್ ತರುವುದಕ್ಕೆ ದೇಶದ ಜನರು ಇನ್ನಷ್ಟು ಕಾಯಬೇಕಾದ ಅಗತ್ಯವಿಲ್ಲ. ವಿದೇಶದಲ್ಲಿರುವ ಕಪ್ಪುಹಣದ ಬಗ್ಗೆ ಬ್ಯಾಂಕ್‌ಗಳು ನೀಡಿದ ಮಾಹಿತಿಗಳನ್ನೆಲ್ಲ ನಾವು  ಸುಪ್ರೀಂಕೋರ್ಟ್‌ಗೆ ನೀಡಿದ್ದೇವೆ. ವಿದೇಶಿ ಬ್ಯಾಂಕ್‌ಗಳು ಕಪ್ಪು ಹಣದ ಬಗ್ಗೆ ಮಾಹಿತಿ ನೀಡತೊಡಗಿವೆ ಎಂದು ಜೇಟ್ಲಿ ಹೇಳಿದ್ದಾರೆ.

ಕಪ್ಪುಹಣ ಹೊಂದಿರುವ ಭಾರತೀಯರ ವಿವರಗಳನ್ನು ನೀಡಲು ಫ್ರಾನ್ಸ್ , ಜರ್ಮನಿ ಮುಂದಾಗಿದ್ದರೆ, ಇತ್ತ ಸ್ವಿಜರ್ ಲ್ಯಾಂಡ್ ಮಾಹಿತಿ ನೀಡಲು ನಿರಾಕರಿಸಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಈ ಬಗ್ಗೆ ಸ್ವಿಜರ್‌ಲ್ಯಾಂಡ್‌ನ ಪ್ರತಿನಿಧಿಗಳೊಂದಿಗೆ ಭಾರತ ಮಾತುಕತೆ ನಡೆಸಿತ್ತು.

ವರ್ಷಗಳ ಹಿಂದೆ ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿರಿಸಿದ ಹಣ ರು.8,547 ಕೋಟಿ ಆಗಿತ್ತು. ಆದರೆ 2013ರ ವರ್ಷಾಂತ್ಯಕ್ಕೆ ಇದು ರು. 14,100 ಕೋಟಿ ಆಗಿದೆ ಎಂದು ಇತ್ತೀಚೆಗೆ ಸ್ವಿಸ್ ನ್ಯಾಷನಲ್ ಬ್ಯಾಂಕ್‌ನ ನೀಡಿದ ವಿವರಗಳಿಂದ ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement