ನಾನೊಬ್ಬ ಹಿಂದೂ ಕ್ರಿಶ್ಚಿಯನ್: ವಿವಾದಕ್ಕೀಡಾದ ಗೋವಾ ಉಪಮುಖ್ಯಮಂತ್ರಿ ಹೇಳಿಕೆ
ಬಿಜೆಪಿ ಹಿರಿಯ ನಾಯಕ ಮತ್ತು ಗೋವಾದ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿ ಸೋಜಾ ಅವರು...
ಪಣಜಿ: ಬಿಜೆಪಿ ಹಿರಿಯ ನಾಯಕ ಮತ್ತು ಗೋವಾದ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿ ಸೋಜಾ ಅವರು ಭಾರತ ಹಿಂದೂ ರಾಷ್ಟ್ರವಾಗಿದ್ದು, ನಾನೊಬ್ಬ ಹಿಂದೂ ಕ್ರಿಶ್ಚಿಯನ್ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಶುಕ್ರವಾರ ಗೋವಾ ವಿಧಾನಸಭೆಯಲ್ಲಿ ಸಂಪುಟ ಸಚಿವ ದೀಪಕ್ ಧವಾಲಿಕರ್ ಅವರು ನರೇಂದ್ರ ಮೋದಿಯವರು ಭಾರತದನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಾರೆ ಎಂದು ಹೇಳಿದ್ದರು.
ಆ ವೇಳೆ ಸಚಿವರಿಗೆ ಬೆಂಬಲ ಸೂಚಿಸಿದ ಡಿಸೋಜಾ ಅವರು ಭಾರತ ಎಂದಿಗೂ ಹಿಂದೂ ರಾಷ್ಟ್ರವೇ ಆಗಿತ್ತು. ಇದು ಹಿಂದೂಸ್ತಾನ, ಹಿಂದೂಸ್ತಾನದಲ್ಲಿರುವ ಎಲ್ಲರೂ ಹಿಂದೂಗಳೇ ನಾನೂ ಸೇರಿದಂತೆ. ನಾನೊಬ್ಬ ಕ್ರಿಶ್ಚಿಯನ್ ಹಿಂದು ಎಂದು ಹೇಳಿದ್ದಾರೆ.
ಡಿಸೋಜಾ ಅವರ ಈ ಹೇಳಿಕೆ ಇದೀಗ ವಿವಾದದ ವಸ್ತುವಾಗಿದೆ.