ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

MyGov ವೆಬ್ ಸೈಟ್ ಗೆ ಪ್ರಧಾನಿ ಚಾಲನೆ

ಸರ್ಕಾರದ ಕಾರ್ಯಗಳನ್ನು ಸುಗುಮಗೊಳಿಸುವುದಕ್ಕಾಗಿ ಹಾಗು ದೇಶದ ಪ್ರಜೆಗಳು ತಮ್ಮ ಅಭಿಪ್ರಾಯ ...

Rashmi Kasaragodu
Updated On : 26 Jul 2014, 3:43 am

ನವದೆಹಲಿ: ಸರ್ಕಾರದ ಕಾರ್ಯಗಳನ್ನು ಸುಗುಮಗೊಳಿಸುವುದಕ್ಕಾಗಿ ಹಾಗು ದೇಶದ ಪ್ರಜೆಗಳು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಹಕಾರಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ mygov.nic.inಎಂಬ ವೆಬ್ ಸೈಟ್ ಗೆ ಚಾಲನೆ ನೀಡಿದ್ದಾರೆ.

ಮೋದಿ ಸರ್ಕಾರ 60 ದಿನಗಳನ್ನು ಪೂರೈಸಿರುವ ಖುಷಿಯಲ್ಲಿ ಜನರಿಗೆ ಈ ಕೊಡುಗೆಯನ್ನು ನೀಡಲಾಗಿದೆ. ಸರ್ಕಾರ ಕೈಗೊಂಡಿರುವ ಕ್ಲೀನ್ ಗಂಗಾ ಅಥವಾ ಇನ್ಯಾವುದೇ  ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ  ಜನರ ಅಭಿಪ್ರಾಯಗಳನ್ನು ಈ ವೆಬ್‌ಸೈಟ್‌ನಲ್ಲಿ ದಾಖಲಿಸಬಹುದಾಗಿದೆ.

ಉತ್ತಮ ಆಡಳಿತವನ್ನು ನೀಡಲು ಸರ್ಕಾರಕ್ಕೆ ಸಹಾಯವಾಗುವಂತೆ ನಾವು ಈ ವೆಬ್‌ಸೈಟ್‌ನ್ನು ರೂಪಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಸರ್ಕಾರ ಮತ್ತು ಜನರ ಮಧ್ಯೆ ಸೇತುವೆಯಂತೆ ಈ ವೆಬ್‌ಸೈಟ್ ಕಾರ್ಯವೆಸಗಲಿದೆ. ಸರ್ಕಾರದ ಕಾರ್ಯಗಳಲ್ಲಿ ಜನರ ಸಹಕಾರವಿಲ್ಲದೇ ಹೋದರೆ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಜನರು ಮತ್ತು ಸರ್ಕಾರವನ್ನು ಬೆಸೆಯುವ ಇಂಥಾ ಕಾರ್ಯಗಳು ಚುನಾವಣಾ ಸಮಯಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದು ಪ್ರಧಾನಿ ನುಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement