ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

300 ರು.ಗೆ ನನ್ನ ವಿರುದ್ಧ ಹೋರಾಟ: ನಿತ್ಯಾನಂದ ವ್ಯಂಗ್ಯ

ಕೇವಲ 300 ರುಪಾಯಿಗಾಗಿ ನನ್ನ ವಿರುದ್ಧ ಹೋರಾಟ ಮಾಡುತ್ತಾರೆ...

Vishwanath S
Updated On : 28 Jul 2014, 4:59 am

ಬೆಂಗಳೂರು: ಕೇವಲ 300 ರುಪಾಯಿಗಾಗಿ ನನ್ನ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ರಾಸಲೀಲೆ ಪ್ರಕರಣದ ಆರೋಪಿ ಬಿಡದಿ ಆಶ್ರಮ ಪೀಠಾಧ್ಯಕ್ಷ ನಿತ್ಯಾನಂದ ಕನ್ನಡಪರ ಹೋರಾಟಗಾರರ ವಿರುದ್ಧ ವ್ಯಂಗ್ಯವಾಡಿದ್ದಾನೆ.

ಕನ್ನಡ ಪರ ಹೋರಾಟಗಾರರ ಕುರಿತು ನಿತ್ಯಾನಂದ ಟೀಕಿಸಿದ್ದು, 300 ರುಪಾಯಿಗೆ ಹೋರಾಟ ಮಾಡುತ್ತಾರೆ ಎನ್ನುವ ಮೂಲಕ ತನ್ನ ಕೀಳು ತನವನ್ನು ಹೊರಹಾಕಿದ್ದಾನೆ. ನನ್ನ ವಿರುದ್ಧ ಹೋರಾಟ ಮಾಡುವವರಿಗೆ ನನ್ನ ವಿರುದ್ಧ ದ್ವೇಷವಿಲ್ಲ ಆದರೆ ದುಡ್ಡಿಗಾಗಿ ನನ್ನ ಆಶ್ರಮದ ಮುಂದೆ ಪ್ರತಿಭಟನೆ ಮಾಡುತ್ತಾರೆ ಎಂದು ಹೇಳಿದ್ದಾನೆ.

ಪ್ರತಿಭಟನಾಕಾರರ ಕಾವು ನನಗೆ ಮುಟ್ಟಲ್ಲ ಅವರ ಪಾಡಿಗೆ ಅವರು ಪ್ರತಿಭಟನೆ ನಡೆಸುತ್ತಾರೆ. ಪ್ರತಿಭಟನೆಯ ಶಿಫ್ಟ್ ಮುಗಿದ ನಂತರ ಮನೆಗಳಿಗೆ ತೆರಳುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ಆಶ್ರಮಕ್ಕೆ ಎಷ್ಟು ದ್ವಾರಗಳಿವೆ ಎಂದು ನನಗೆ ಬೇಕಾದ ದ್ವಾರದಲ್ಲಿ ಸಲಿಸಾಗಿ ನಾನು ಓಡಾಡುತ್ತೇನೆ ಎಂದು ಭಕ್ತರೊಂದಿಗೆ ಉಪನ್ಯಾಸದ ಸಂದರ್ಭದಲ್ಲಿ ನಿತ್ಯಾನಂದ ಲೇವಡಿ ಮಾಡಿದ್ದಾನೆ.

ಸುಮಾರು 30 ವರ್ಷಗಳಿಂದ ಈ ಹೋರಾಟಗಾರರದ್ದು ಇದೇ ಪಾಡು. ಕ್ಯಾಲೆಂಡರ್ ರೀತಿಯಲ್ಲಿ ಹೋರಾಟ ಮಾಡಿ ನಂತರ ಮರೆಯಾಗುತ್ತಾರೆ ಎಂದು ಹೇಳಿದ್ದಾನೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement