ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಡ್ಕರಿ ನಿವಾಸಕ್ಕೆ ಕಳ್ಳಗಿವಿ: ತನಿಖೆಗೆ ಕೇಂದ್ರ ನಕಾರ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸದಲ್ಲಿ ಅತ್ಯಾಧುನಿಕ....

Lingaraj Badiger
Updated On : 28 Jul 2014, 1:42 am

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸದಲ್ಲಿ ಅತ್ಯಾಧುನಿಕ ಸೂಕ್ಷ್ಮ ಕದ್ದಾಲಿಕೆ ಉಪಕರಣಗಳು ದೊರೆತಿವೆ ಎಂಬ ವರದಿಯ ಕುರಿತು ತನಿಖೆ ನಡೆಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ತಮ್ಮ ನಿವಾಸದಲ್ಲಿ ಕದ್ದಾಲಿಕೆ ಸಾಧನಗಳು ಪತ್ತೆಯಾಗಿವೆ ಎಂಬ ವರದಿಯನ್ನು ಸ್ವತಹ ನಿತಿನ್ ಗಡ್ಕರಿ ಅವರೇ ತಳ್ಳಿಹಾಕಿದ್ದರೂ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮತ್ತು ಅಂಗಪಕ್ಷಗಳು ಒತ್ತಾಯಿಸಿದ್ದವು.

ಆದರೆ ಕಾಂಗ್ರೆಸ್ ಬೇಡಿಕೆಯನ್ನು ತಿರಸ್ಕರಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ಗಡ್ಕರಿ ಅವರೇ ಅದೊಂದು ಊಹಾಪೋಹ ಎಂದಿದ್ದಾರೆ. ಹೀಗಾಗಿ ತಾವು ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯ 13 ತೀನ್ ಮೂರ್ತಿ ಲೇನ್‌ನಲ್ಲಿರುವ ಗಡ್ಕರಿ ನಿವಾಸದಲ್ಲಿ ಹೈ ಪವರ್ ಕದ್ದಾಲಿಕೆ ಸಾಧನಗಳು ಪತ್ತೆಯಾಗಿರುವ ಬಗ್ಗೆ 'ದಿ ಸಂಡೇ ಗಾರ್ಡಿಯನ್‌' ವರದಿ ಮಾಡಿದೆ. ಇದರಲ್ಲಿ ವಿದೇಶಿ ಸಂಸ್ಥೆಯ ಕೈವಾಡವನ್ನೂ ಪತ್ರಿಕೆ ಶಂಕಿಸಿದೆ. ಪ್ರಕರಣ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ, ವರದಿಯನ್ನು ತಳ್ಳಿಹಾಕಿರುವ ಸಚಿವ ಗಡ್ಕರಿ, ನನ್ನ ಮನೆಯಲ್ಲಿ ಅಂತಹ ಯಾವುದೇ ಸಾಧನ ಪತ್ತೆಯಾಗಿಲ್ಲ. ಇದೆಲ್ಲ ಊಹಾಪೋಹ ಎಂದಿದ್ದಾರೆ. ಆದರೆ ತನ್ನ ಮನೆಯಲ್ಲಿ ಸೂಕ್ಷ್ಮ ಸಾಧನಗಳು ಪತ್ತೆಯಾಗಿರುವ ಬಗ್ಗೆ ಗಡ್ಕರಿ, ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್‌ಗೆ ಮಾಹಿತಿ ನೀಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement