ಆತ್ಮಾಹುತಿ ದಳ ದಾಳಿ; ಅಫ್ಘಾನ್ ಅಧ್ಯಕ್ಷರ ಸಂಬಂಧಿ ಸಾವು
ಕಂದಾಹಾರ್ನಲ್ಲಿ ಮಂಗಳವಾರ ನಡೆದ ಆತ್ಮಾಹುತಿ ದಳದ...
ಕಾಬುಲ್: ಕಂದಾಹಾರ್ನಲ್ಲಿ ಮಂಗಳವಾರ ನಡೆದ ಆತ್ಮಾಹುತಿ ದಳದ ಬಾಂಬ್ ದಾಳಿಯಲ್ಲಿ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜೈ ಅವರ ಸಂಬಂಧಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.
ಆತ್ಮಾಹುತಿ ದಳದ ಆಗಂತುಕರೊಬ್ಬರು ಈದ್ ಹಬ್ಬದ ಪ್ರಯುಕ್ತ ಹಮೀದ್ ಕರ್ಜೈ ಅವರ ಸಂಬಂಧಿ ಹಷ್ಮತ್ ಕರ್ಜೈ ಅವರ ಮನೆಗೆ ಬಂದು ಈ ಕೃತ್ಯವೆಸಗಿದ್ದಾರೆ ಎಂದು ವಕ್ತಾರ ಧವಾ ಖಾನ್ ಮಿನಾಪಲ್ ಹೇಳಿದ್ದಾರೆ.
ಹಷ್ಮತ್ ಕರ್ಜೈ ಅವರ ಬಳಿ ಬಂದ ಆಗಂತುಕ ಈದ್ ಶುಭಾಶಯ ಕೋರಿ ಆಲಿಂಗನ ಮಾಡಿದ ನಂತರ ಬಾಂಬ್ ಸ್ಫೋಟವಾಗುವಂತೆ ಮಾಡಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಸದ್ಯ ಲಭ್ಯವಾಗಿಲ್ಲ.
2011ರಲ್ಲಿ ಕರ್ಜೈ ಅವರ ಸಹೋದರ, ಕಂದಾಹಾರ್ ಪ್ರದೇಶ ಕೌನ್ಸಿಲ್ ಮುಖ್ಯಸ್ಥನಾಗಿದ್ದ ಅಹ್ಮದ್ ವಾಲಿ ಕರ್ಜೈ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.