ಆತ್ಮಾಹುತಿ ದಾಳಿಗೆ ದಾಳಿಗೆ ಕರ್ಜಾಯಿ ಸೋದರ ಸಂಬಂಧಿ ಬಲಿ
ಕಂದಹಾರ್: ಕಂದಹಾರ್ನಲ್ಲಿ ಸಂಭವಿಸಿದ ಮಾನವ ಬಾಂಬ್ ದಾಳಿಗೆ ಅಫ್ಘಾನಿಸ್ಥಾನದ ನಿರ್ಗಮಿತಿ ಅಧ್ಯಕ್ಷ ಹಮೀದ್ ಕರ್ಜಾಯಿ ಅವರು ಸೋದರ ಸಂಬಂಧಿಯೊಬ್ಬರು ಬಲಿಯಾಗಿದ್ದಾರೆ.
ಈದ್ ಹಬ್ಬಗ ಸಂಭ್ರಮದಲ್ಲಿದ್ದಾಗ ದುಷ್ಕರ್ಮಿ ಈ ದಾಳಿ ನಡೆಸಿದ್ದು, ದಾಳಿಯಲ್ಲಿ ಕರ್ಜಾಯಿ ಅವರ ಸೋದರ ಸಂಬಂಧಿ ಹಶ್ಮತ್ ಕರ್ಜಾಯಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಾನವ ಬಾಂಬರ್ ತನ್ನ ಪೇಟದೊಳಗೆ ಸ್ಫೋಟಕಗಳನ್ನು ಹುದುಗಿಸಿಟ್ಟುಕೊಂಡು ಹಶ್ಮಿತ್ ಅವರೊಂದಿಗೆ ಈದ್ ಶುಭಾಶಯ ವಿನಿಮಯ ಮಾಡಿಕೊಳ್ಳಲು ಅಪ್ಪಿಕೊಳ್ಳುತ್ತಿದ್ದಂತೆಯೋ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚುನಾವಣೆ ಫಲಿತಾಂಶದ ಪರಿಣಾಮದಿಂದ ಆಕ್ರೋಶಗೊಂಡ ತಾಲಿಬಾನಿ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಾಹುತಿ ದಾಳಿ ನಡೆಸುತ್ತಿದ್ದಾರೆ ಎಂದು ಭಧ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಿ ಪ್ರಿಯರಾಗಿದ್ದ ಹಶ್ಮತ್ ಅವರು ತನ್ನ ನೆಚ್ಚಿನ ಸಾಕು ಪ್ರಾಣಿಯಾಗಿ ಸಿಂಹವೊಂದನ್ನೇ ಸಾಕಿಕೊಂಡ ಕಾರಣಕ್ಕೆ ಈ ಹಿಂದೆ ಸುದ್ದಿಯಾಗಿದ್ದರು.