ಗಾಜಾದ ಏಕೈಕ ವಿದ್ಯುತ್ ಘಟಕ ಧ್ವಂಸಗೈದ ಇಸ್ರೇಲ್
ಗಾಜಾದಲ್ಲಿರುವ ಹಮಾಸ್ ಉಗ್ರರನ್ನ ಸದೆಬಡಿಯುವ ಸಲುವಾಗಿ ಇಸ್ರೇಲ್ ತನ್ನ...
ಗಾಜಾ: ಗಾಜಾದಲ್ಲಿರುವ ಹಮಾಸ್ ಉಗ್ರರನ್ನ ಸದೆಬಡಿಯುವ ಸಲುವಾಗಿ ಇಸ್ರೇಲ್ ತನ್ನ ದಾಳಿಯನ್ನ ಇನ್ನಷ್ಟು ತೀವ್ರಗೊಳಿಸಿದ್ದು, ಹಮಾಸ್ ನಿಯಂತ್ರಿತ ಗಾಜಾ ಪಟ್ಟಿಯಲ್ಲಿರುವ ಏಕೈಕ ವಿದ್ಯುತ್ ಸ್ಥಾವರವನ್ನು ಇಸ್ರೇಲ್ ಮಂಗಳವಾರ ಸ್ಫೋಟಿಸಿದೆ.
24 ಗಂಟೆಗಳ ಕದನ ವಿರಾಮ ಮುಗಿದ ಬಳಿಕ ಇಸ್ರೇಲ್, ಇಸ್ಲಾಮಿಕ್ ಉಗ್ರಗಾಮಿ ಗುಂಪಿನ ಮೇಲೆ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದೆ. ಗಾಜಾ ಸಿಟಿಯ ಆಗಸದಲ್ಲಿ ಬಾಂಬ್‌ಗಳ ಸುರಿಮಳೆಯಾಗುತ್ತಿದ್ದು, ಭಾರೀ ಧೂಳು ಮತ್ತು ಹೊಗೆ ಗಗನಕ್ಕೆ ಚಿಮ್ಮಿದೆ.
ಹಮಾಸ್ ವಿರುದ್ಧ ಸುದೀರ್ಘ ಕದನಕ್ಕೆ ಸಿದ್ಧ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಎಚ್ಚರಿಕೆ ನೀಡಿದ್ದರು.
ಇಸ್ರೇಲಿ ಯುದ್ಧ ವಿಮಾನಗಳು ಗಜಾ ಪಟ್ಟಿಯುದ್ದಕ್ಕೂ ಬಾಂಬ್ ದಾಳಿ ನಡೆಸುತ್ತಿದ್ದು, ಹಮಾಸ್‌ನ ವರಿಷ್ಠ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಬಂಗಲೆ ಮತ್ತು ಹಮಾಸ್‌ನ ಉಪಗ್ರಹ ಟಿವಿ ಕೇಂದ್ರವನ್ನು ಧ್ವಂಸಗೊಳಿಸಿವೆ. ದಾಲಿಯಲ್ಲಿ ಒಂದು ಪ್ರಮುಖ ಮಸೀದಿ ಹಾಗೂ ಕೆಲವು ಸರಕಾರಿ ಕಚೇರಿಗಳೂ ನಾಶವಾಗಿವೆ.
ಗಾಜಾದ ವಿದ್ಯುತ್ ಸ್ಥಾವರದ ಮೂರು ಇಂಧನ ಟ್ಯಾಂಕ್‌ಗಳ ಪೈಕಿ ಒಂದು ಸ್ಫೋಟಗೊಂಡಿದ್ದು, ಭಾರೀ ಪ್ರಮಾಣದ ಬೆಂಕಿ ಮತ್ತು ಹೊಗೆಯೆದ್ದಿದೆ. ಸ್ಥಾವರದೊಳಗೆ 15 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಿದ್ಯುತ್ ಕಂಪನಿಯ ಮುಖ್ಯಸ್ಥ ಜಮಾಲ್ ದರ್ದಾಸಾವಿ ತಿಳಿಸಿದರು.