ನಿತ್ಯಾನಂದನ ವಿರುದ್ಧದ ವಾರೆಂಟ್ ಗೆ 'ಹೈ' ತಡೆಯಾಜ್ಞೆ
ಬೆಂಗಳೂರು: ಬಿಡದಿ ಆಶ್ರಮದ ಪೀಠಾಧ್ಯಕ್ಷ ನಿತ್ಯಾನಂದ ವಿರುದ್ಧ ರಾಮನಗರ ಸೆಷನ್ಸ್ ಕೋರ್ಟ್ ನೀಡಿದ್ದ ಜಾಮೀನು ರಹಿತ ವಾರೆಂಟ್ ಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಪುರುಷತ್ವ ಪರೀಕ್ಷೆ ಸಂಬಂಧದ ವಿಚಾರಣೆಗೆ ಗೈರು ಹಾಜರಾದ ನಿತ್ಯಾನಂದನಿಗೆ ರಾಮನಗರ ಸಿಜೆಎಂ ಕೋರ್ಟ್ ಸೋಮವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು.
ಇದನ್ನು ಪ್ರಶ್ನಿಸಿ ನಿತ್ಯಾ ಪರ ವಕೀಲರು ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ರಾಮನಗರ ಸೆಷನ್ಸ್ ಕೋರ್ಟ್ ನೀಡಿದ್ದ ವಾರೆಂಟ್ಗೆ ತಡೆಯಾಜ್ಞೆ ನೀಡಿದೆ.
ನಿತ್ಯಾನಂದನ ರಾಸಲೀಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ನೋಟಿಸ್ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.