ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್‌ ದುಷ್ಕೃತ್ಯಕ್ಕೆ ಭಾರತ ದಿಟ್ಟ ಉತ್ತರ ನೀಡಿದೆ: ಬಿಕ್ರಮ್‌ ಸಿಂಗ್

ಭಾರತದ ಗಡಿ ನಿಯಂತ್ರಣಾ ರೇಖೆಯಲ್ಲಿ...

Vishwanath S
Updated On : 31 Jul 2014, 6:23 am

ನವದೆಹಲಿ: ಭಾರತದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ನಡೆಸಿದ ದುಷ್ಕೃತ್ಯಗಳಿಗೆ ಭಾರತ ಸಹ ದಿಟ್ಟ ಉತ್ತರ ನೀಡಿದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಬಿಕ್ರಮ್ ಸಿಂಗ್ ಅವರು ಹೇಳಿದ್ದಾರೆ.

2013ರಲ್ಲಿ ಭಾರತದ ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ಭಾರತೀಯ ಸೈನಿಕರ ಶಿರಚ್ಛೇದನ ಮಾಡಿದ್ದ ಪಾಕ್  ಕೃತ್ಯಕ್ಕೆ ಭಾರತವು ಸೂಕ್ತ ಉತ್ತರ ನೀಡಿದೆ ಎಂದು ನಿವೃತ್ತಿಗು ಮುನ್ನ ಜನರಲ್ ಬಿಕ್ರಮ್ ಸಿಂಗ್ ಅವರು ಹೇಳಿದ್ದಾರೆ.

ಈ ಕುರಿತು ಮಾಧ್ಯಗಳೊಂದಿಗೆ ಮಾತನಾಡಿದ ಬಿಕ್ರಮ್ ಸಿಂಗ್, ಪಾಕಿಸ್ತಾನದ ಈ ದುಷ್ಕೃತ್ಯಕ್ಕೆ ಭಾರತವು ಸೂಕ್ತ ಉತ್ತರ ನೀಡಿದೆ. ಇದು ಪಾಕಿಸ್ತಾನದ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದರು.

ಘಟನೆಗೆ ಸಂಬಂಧಿಸಿದಂತೆ ಭಾರತೀಯ ರಕ್ಷಣಾ ಇಲಾಖೆಯ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ಆದರೆ ಈ ಆರೋಪಗಳಲ್ಲಿ ಹುರುಳಿಲ್ಲ ಎಂದು  ಸಿಂಗ್ ಅವರು ಸಮರ್ಥಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement