ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೇನಾ ಮುಖ್ಯಸ್ಥರಾಗಿ ದಲ್‌ಬೀರ್ ಸಿಂಗ್ ಅಧಿಕಾರ ಸ್ವೀಕಾರ

ಭಾರತೀಯ ಸೇನೆಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್...

Vishwanath S
Updated On : 31 Jul 2014, 7:15 am

ನವದೆಹಲಿ: ಭಾರತೀಯ ಸೇನೆಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ದಲ್‌ಬೀರ್ ಸಿಂಗ್ ಸುಹಾಗ್ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.

ದೇಶದ ಸಶಕ್ತ 13 ಲಕ್ಷ ಸೈನಿಕರನ್ನು ಹೊಂದಿರುವ ಭಾರತೀಯ ಸೇನೆಯ 26ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಾಲಿ ಸೇನಾಪಡೆ ಮುಖ್ಯಸ್ಥರಾಗಿದ್ದ ಜನರಲ್ ಬಿಕ್ರಮ್ ಸಿಂಗ್ ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಪಸೇನಾ ಮುಖ್ಯಸ್ಥ ದಲ್‌ಬೀರ್ ಸಿಂಗ್ ಸುಹಾಗ್‌ಗೆ ಅಧಿಕಾರ ಹಸ್ತಾಂತರ ಮಾಡಿದರು.

59 ವರ್ಷದ ಸುಹಾಗ್ ಅವರು 1987ರಲ್ಲಿ ಶ್ರೀಲಂಗಾದಲ್ಲಿ ನಡೆದ ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಶಂಸೆಗೆ ಪಾತ್ರರಾಗಿದ್ದರು. ಅವರು ಒಬ್ಬ ಗೂರ್ಖಾ ಅಧಿಕಾರಿಯಾಗಿದ್ದು ಈವರೆಗೆ ಭೂಸೇನಾ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ ಡಿಸೆಂಬರ್‌ನಲ್ಲಿ ಅವರನ್ನು ಭೂಸೇನಾ ಉಪ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಅದಕ್ಕೂ ಮುನ್ನ ಅಂದರೆ 16, 2012ರಂದು ಪೂರ್ವ ಸೇನಾ ಕಮಾಂಡರ್ ಆಗಿ ನೇಮಕಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement