ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅತ್ಯಾಚಾರ ಮಾಡಿದ ಜ್ಯೋತಿಷಿಯ ಶಿಶ್ನ ಕತ್ತರಿಸಿದ ಯುವತಿ

ಬಿಹಾರದ ಮಾದೇಪುರಲ್ಲಿ ಘಟನೆ....

Lingaraj Badiger
Updated On : 1 Aug 2014, 5:08 am

ಮಾದೇಪುರ: ಬಿಹಾರದ ಮಾದೇಪುರ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಜ್ಯೋತಿಷಿಯ ಶಿಶ್ನವನ್ನೇ ಕತ್ತರಿಸಿ ಸೇಡು ತೀರಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವತಿ ತನ್ನ ಸಮಸ್ಯೆ ಪರಿಹಾರಕ್ಕಾಗಿ ಜ್ಯೋತಿಷಿ ಮಹೇಂದ್ರ(35)ನ ಬಳಿಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ಅತ್ಯಾಚಾರ ಆರೋಪದ ಮೇಲೆ ಕಾಮುಕ ಜ್ಯೋತಿಷಿಯನ್ನು ಮಾದೇಪುರ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಷಿಯಿಂದ ಅತ್ಯಾಚಾರಕ್ಕೆ ಒಳಗಾದ ಯುವತಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಅನಾರೋಗ್ಯಕ್ಕೆ ಯಾರೋ ಮಾಟ ಮಾಡಿಸಿದ್ದಾರೆ ಎಂದು ಭಾವಿಸಿ ಯುವತಿಯ ತಾಯಿ ಆಕೆಯನ್ನು ಜ್ಯೋತಿಷಿಯ ಬಳಿ ತೆರಳಲು ಸೂಚಿಸಿದ್ದಾಳೆ. ತಾಯಿಯ ಸೂಚನೆಯಂತೆ ಯುವತಿ ಕಳೆದ ಜುಲೈ 1ರಂದು ಪರಿಹಾರಕ್ಕಾಗಿ ಜ್ಯೋತಿಷಿಯ ಮನೆಗೆ ತೆರಳಿದ್ದಾಳೆ. ಈ ವೇಳೆ ಜ್ಯೋತಿಷಿ ಪರಿಹಾರ ನೀಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ರೇಪ್‌ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವತಿ ಮರುದಿನ ರಾತ್ರಿ ಜ್ಯೋತಿಷಿಯ ಮನೆಗೆ ಮೊಬೈಲ್‌ ಮತ್ತು ಹರಿತವಾದ ಚಾಕುವಿನೊಂದಿಗೆ ತೆರಳಿದ್ದು, ಜ್ಯೋತಿಷಿಯ ಶಿಶ್ನವನ್ನೇ ಚಾಕುವಿನಿಂದ ಕತ್ತರಿಸಿ ಹಾಕಿದ್ದಾಳೆ. ಈ ಸಂದರ್ಭದ ಮಾತುಕತೆಯನ್ನು ಮೊಬೈಲ್‌ಲ್ಲಿ ರೆಕಾರ್ಡ್ ಮಾಡಿದ್ದಾಳೆ. ನಡೆದ ಘಟನೆಯನ್ನು ಆಕೆ ಪೋಷಕರಲ್ಲಿ ಹೇಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ಸ್ವೀಕರಿಸದ ಪೊಲೀಸರು ಸಂಧಾನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರು ನೀಡಿದರೆ ಕೊಲೆ ಮಾಡುವುದಾಗಿ ಜ್ಯೋತಿಷಿ ಕಡೆಯವರು ಯುವತಿಗೆ ಬೆದರಿಕೆ ಹಾಕಿದ್ದಾರೆ. ಕೊನೆಗೆ ರಾಜಕೀಯ ನಾಯಕರು ಪ್ರವೇಶವಾಗಿ ಪೊಲೀಸ್‌ ಠಾಣೆಯಲ್ಲಿ ಜು.30ರಂದು ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಕೊಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement